ಚೆಟ್ಟಳ್ಳಿ, ಅ. 2: ವೀರಾಜಪೇಟೆ ಸಮೀಪ ಕಲ್ಲುಬಾಣೆ ಯೂನಿಟ್ ಸುನ್ನಿ ಯುವಜನ ಸಂಘ (ಎಸ್.ವೈ.ಎಸ್) ಇದರ ಅಧ್ಯಕ್ಷರಾಗಿ ಜಾಫರ್ ಮಿಸ್ಬಾಹಿ ಆಯ್ಕೆಯಾಗಿದ್ದಾರೆ. ಎಸ್.ವೈ.ಎಸ್. ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪಿ.ಕೆ. ಅಬ್ದುಲ್ ಲತೀಫ್ ಕಾರ್ಯದರ್ಶಿ, ವಿ.ಪಿ. ಅಬ್ದುಲ್ ಖಾದರ್ ದಹ್ವಾ ಕಾರ್ಯದರ್ಶಿ, ಕೆ.ಎ. ಇಬ್ರಾಹಿಂ ಇಸಾಬಾ ಕಾರ್ಯದರ್ಶಿ, ಕೆ.ಎ. ಹಂಸ ಉಪಾಧ್ಯಕ್ಷ, ಕೆ.ಎ. ಯೂಸುಫ್ ಕೋಶಾಧಿಕಾರಿಯಾಗಿ ಆಯ್ಕೆಯಾದರು.

ವಿ.ಪಿ. ಅಬ್ದುಲ್ ಖಾದರ್ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಕಾರ್ಯದರ್ಶಿ ಅಬ್ದುಲ್ ಲತೀಫ್ ಸ್ವಾಗತಿಸಿ, ಕೆ.ಹೆಚ್. ಆಶಿಕ್ ವಂದಿಸಿದರು.

ಈ ಸಂದರ್ಭ ಸುನ್ನಿ ಯುವಜನ ಸಂಘ (ಎಸ್.ವೈ.ಎಸ್.) ವೀರಾಜಪೇಟೆ ಸೆಕ್ಟರ್ ನಾಯಕರಾದ ಅಬ್ದುಲ್ ರೆಹಮಾನ್ ಸಹದಿ, ಅಬೂಬಕರ್ ಕಡಂಗ ಇದ್ದರು.