ಮಡಿಕೇರಿ, ಅ. 1: ಮಡಿಕೇರಿ ಕೊಡವ ಸಮಾಜ ಕಲ್ಚರಲ್ ಅಂಡ್ ಸೋಷಿಯಲ್ ವೆಲ್‍ಫೇರ್ ಸೆಂಟರ್‍ನ 20ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು.

ಸಂಸ್ಥೆಯ ಅಧ್ಯಕ್ಷ ಮೂವೇರ ಶಂಭು ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಸ್ಥೆಯ ಕಟ್ಟಡದ ಅಭಿವೃದ್ಧಿ, ಸದಸ್ಯತ್ವ ಸೇರಿದಂತೆ ಸಂಘದ ಚಟುವಟಿಕೆ, ಅಭಿವೃದ್ಧಿ ಕಾರ್ಯಗಳ ಕುರಿತಾಗಿ ಚರ್ಚೆ ನಡೆಯಿತು.

ಅಧ್ಯಕ್ಷ ಶಂಭು ಸುಬ್ಬಯ್ಯ ಅವರು ಕಾರ್ಯಚಟುವಟುಕೆಗಳ ಕುರಿತು ವಿವರ ನೀಡಿದರು. ಅತಿಥಿಗಳಾಗಿದ್ದ ಗೌರವ ಅಧ್ಯಕ್ಷರಾಗಿರುವ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಅವರು ಹಲವು ಸಲಹೆಗಳನ್ನು ನೀಡಿದರು.

ಸಂಸ್ಥೆಯ ಕಾರ್ಯದರ್ಶಿ ಚೆರುಮಂದಂಡ ಮಣಿ ಪೊನ್ನಪ್ಪ ಅವರು ಕಳೆದ ಮಹಾಸಭೆಯ ವರದಿ, ಲೆಕ್ಕಪತ್ರಗಳ ಕುರಿತಾಗಿ ಮಾಹಿತಿ ನೀಡಿದರು. ಖಜಾಂಚಿ ಬಿದ್ದಂಡ ಬೆನ್ ಬೆಳ್ಯಪ್ಪ ಅವರು ಆಡಳಿತ ಮಂಡಳಿಯ ವರದಿ ಮಂಡಿಸಿದರು.

ಈ ಸಂದರ್ಭ ಮೃತಪಟ್ಟ ಸಂಘದ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು. ಮಂಡೀರ ಯುಕ್ತ ನೀಲಮ್ಮ ಪ್ರಾರ್ಥಿಸಿ, ಶಂಭು ಸುಬ್ಬಯ್ಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಬಲ್ಯಾಟಂಡ ಪಾರ್ಥ ಚಂಗಪ್ಪ ವಂದಿಸಿದರು. ಸಂಘದ ಮಾಜಿ ಅಧ್ಯಕ್ಷರು ಹಾಲಿ ಆಡಳಿತ ಮಂಡಳಿ ನಿರ್ದೇಶಕರು ಪಾಲ್ಗೊಂಡಿದ್ದರು.