ನಾಪೋಕ್ಲು, ಸೆ. 30: ಬಲ್ಲಮಾವಟಿ ಗ್ರಾಮದ ಚೋಕಿರ ವಾಸುದೇವ ಮಾದಪ್ಪ ಮತ್ತು ದೇವಕ್ಕಿ ದಂಪತಿಗಳ ಪುತ್ರ ರಾಹುಲ್ ಸೋಮಣ್ಣ ಭಾರತೀಯ ಸೇನೆಯ ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಇವರು ಈಗಾಗಲೇ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಮಿಲಿಟರಿ ತರಬೇತಿಯನ್ನು ಪೂರೈಸಿದ್ದು ಪ್ಯಾರಾ ರೆಜಿಮೆಂಟ್‍ನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. - ದುಗ್ಗಳ