ಮಡಿಕೇರಿ, ಸೆ.30: ಜಿಲ್ಲೆ ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ತಾ.1 ರಿಂದ ಏಕರೂಪದ ವೇಳಾಪಟ್ಟಿ ಅಳವಡಿಸಿಕೊಳ್ಳಲಿದ್ದು, ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಗ್ರಾಹಕರ ವ್ಯವಹಾರ ಅವಧಿಯಲ್ಲಿ ಕಾರ್ಯನಿರ್ವಹಿಸಲಿವೆ. ಭಾರತೀಯ ಬ್ಯಾಂಕುಗಳ ಸಂಘ ಹಾಗೂ ಕರ್ನಾಟಕ ರಾಜ್ಯ ಬ್ಯಾಂಕರುಗಳ ಸಮಿತಿಯ ತೀರ್ಮಾನ ದಂತೆ ಜಿಲ್ಲೆಯ ಸಾರ್ವಜನಿಕ ವಲಯಗಳ ಬ್ಯಾಂಕುಗಳು ಏಕರೂಪದ ವೇಳಾಪಟ್ಟಿ ಅಳವಡಿಸಿಕೊಳ್ಳಲಿವೆ ಎಂದು ಜಿಲ್ಲಾ ಲೀಡ್ ಬ್ಯಾಂಕ್‍ನ ಮುಖ್ಯ ಪ್ರಬಂಧಕ ಆರ್.ಕೆ.ಬಾಲಚಂದ್ರ ತಿಳಿಸಿದ್ದಾರೆ.