ಸಿದ್ದಾಪುರ, ಸೆ.30: ಈ ಬಾರಿಯ ಪ್ರವಾಹಕ್ಕೆ ಸಿಲುಕಿ ಸಿದ್ದಾಪುರ ಭಾಗದ ಕರಡಿಗೋಡು ಹಾಗೂ ಗುಹ್ಯ ಗ್ರಾಮಗಳಲ್ಲಿ ನೂರಾರು ಮನೆಗಳು ಹಾನಿಯಾಗಿದ್ದು, ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸಬೇಕೆಂದು ಒತ್ತಾಯಿಸಿ ಸಿದ್ದಾಪುರದಲ್ಲಿ ಇಂದು ಸಂತ್ರಸ್ತರ ನಿವೇಶನ ಹೋರಾಟ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.ಹಳೇ ಸಿದ್ದಾಪುರದಿಂದ ನೂರಾರು ಮಂದಿ ಸಂತ್ರಸ್ತರು ‘ನಮ್ಮ ಭೂಮಿ ನಮ್ಮ ಹಕ್ಕು, ಭಿಕ್ಷೆಯಲ್ಲ.. ಭಿಕ್ಷೆಯಲ್ಲ, ಕೋಟಿ ಹಣ ಕೇಳುತ್ತಿಲ್ಲ, ಶಾಶ್ವತ ಸೂರು ನೀಡಿ’ ಎಂಬಿತ್ಯಾದಿ ಘೋಷಣೆಗಳೊಂದಿಗೆ ಪ್ರತಿಭಟನಾ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಹಳೇ ಸಿದ್ದಾಪುರದಿಂದ ನೂರಾರು ಮಂದಿ ಸಂತ್ರಸ್ತರು ‘ನಮ್ಮ ಭೂಮಿ ನಮ್ಮ ಹಕ್ಕು, ಭಿಕ್ಷೆಯಲ್ಲ.. ಭಿಕ್ಷೆಯಲ್ಲ, ಕೋಟಿ ಹಣ ಕೇಳುತ್ತಿಲ್ಲ, ಶಾಶ್ವತ ಸೂರು ನೀಡಿ’ ಎಂಬಿತ್ಯಾದಿ ಘೋಷಣೆಗಳೊಂದಿಗೆ ಪ್ರತಿಭಟನಾ ಸೂರು ಕಲ್ಪಿಸದೇ ಪೊಳ್ಳು ಭರವಸೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಹೋರಾಟ ಸಮಿತಿಯ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ ಮಾತನಾಡಿ, ಪ್ರವಾಹವಾಗಿ 50 ದಿನಗಳು ಕಳೆದರೂ ಈವರೆಗೂ ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸುವಲ್ಲಿ ಸರಕಾರ ವಿಫಲವಾಗಿದೆ. ಸಂತ್ರಸ್ತರು ತಾತ್ಕಾಲಿಕ ಶೆಡ್ಗಳಲ್ಲಿ ವಾಸಿಸುತ್ತಿದ್ದು, ಸರಕಾರವು ನೀಡಲು ಪ್ರಸ್ತಾಪಿಸಿರುವ ಬಾಡಿಗೆ ಹಣವನ್ನೂ ಕೂಡ ನೀಡಿಲ್ಲ. ಕೂಡಲೇ ಸರಕಾರಿ ಜಾಗವನ್ನು ಗುರುತಿಸಿ, ಸಂತ್ರಸ್ತರಿಗೆ ಒದಗಿಸಬೇಕೆಂದು ಒತ್ತಾಯಿಸಿದರು. ಕೊಂಡಂಗೇರಿ ನಿವಾಸಿ ಅಂದ್ರಮಾನ್ ಮಾತನಾಡಿ, ನದಿ ತೀರದ ನಿವಾಸಿಗಳು ಸೇರಿದಂತೆ ಇತರೆ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದರೂ, ಜನಪ್ರತಿ ನಿಧಿಗಳು ಸಂತ್ರಸ್ತರ ಬಗ್ಗೆ ಕಾಳಜಿ ವಹಿಸದೆ ಕಡೆಗಣಿಸಿದ್ದಾರೆ.
ಗುಹ್ಯ ಕಕ್ಕಟ್ಟುಕಾಡು ಸಂತ್ರಸ್ತ ಪಿ.ಕೆ ಚಂದ್ರನ್ ಮಾತನಾಡಿ, ಸಂತ್ರಸ್ತರಿಗೆ ಜಾತಿ, ಮತ ಭೇದವಿಲ್ಲದೆ ಮಸೀದಿ, ಮಂದಿರಗಳಲ್ಲಿ ಆಶ್ರಯ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸರಕಾರ ಇನ್ನಾದರೂ ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸಿಕೊಡ ಬೇಕೆಂದು ಒತ್ತಾಯಿಸಿದರು.
ನೆಲ್ಯಹುದಿಕೇರಿ ಹೋರಾಟ ಸಮಿತಿಯ ಮುಖಂಡ ಪಿ.ಆರ್ ಭರತ್ ಮಾತನಾಡಿ, ಒತ್ತುವರಿದಾರ ರಿಂದ ಪೈಸಾರಿ ಜಾಗಗಳನ್ನು ತೆರವುಗೊಳಿಸಿ ಪುನರ್ವಸತಿ ಕಲ್ಪಿಸಿ ಕೊಡುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು. ಇಲ್ಲವಾದಲ್ಲಿ ಹೋರಾಟ ಮಾಡುವದಾಗಿ ಎಚ್ಚರಿಸಿದರು. ‘ನಮ್ಮ ಕೊಡಗು’ ಸಂಘಟನೆಯ ಸಂಚಾಲಕ ನೌಷಾದ್ ಜನ್ನತ್ ಮಾತನಾಡಿ, ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸಿಕೊಡದೇ, ಪ್ರಮಾಣ ಪತ್ರಕ್ಕೆ ಸಹಿ ಪಡೆಯುವದು ಸರಿಯಾದ ಕ್ರಮವಲ್ಲ ಎಂದರು.
(ಮೊದಲ ಪುಟದಿಂದ) ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಕೆ.ಬಿ ರಾಜು ಮಾತನಾಡಿ, ಜಿಲ್ಲಾಡಳಿತ ಹಾಗೂ ಸರಕಾರ ಜಾಗವನ್ನು ಗುರುತಿಸಿ, ತುರ್ತು ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ಸಾಮಾಜಿಕ ಕಾರ್ಯಕರ್ತ ಎ.ಎಸ್ ಮುಸ್ತಫ ಮಾತನಾಡಿ, ಸರ್ವೆಕಾರ್ಯ ನಡೆಸಿದ ಪೈಸಾರಿ ಜಾಗವನ್ನು ವಶಕ್ಕೆ ಪಡೆದುಕೊಂಡು ತ್ವರಿತಗತಿಯಲ್ಲಿ ಸಂತ್ರಸ್ತರಿಗೆ ಸೂರು ಕಲ್ಪಿಸಿಬೇಕೆಂದು ಆಗ್ರಹಿಸಿದರು. ಇದೇ ಸಂದರ್ಭ ನೆಲ್ಯಹುದಿಕೇರಿ ಗ್ರಾ.ಪಂ ಉಪಾಧ್ಯಕ್ಷೆ ಸಫಿಯ, ಕರಡಿಗೋಡು ಸಂತ್ರಸ್ತ ಬೈಜು, ಎಚ್.ಆರ್.ಎಸ್ ಸಂಘಟನೆಯ ಗಫೂರ್ ಮಾತನಾಡಿದರು.
ಪ್ರತಿಭಟನಾನಿರತರು ಜಿಲ್ಲಾಧಿಕಾರಿ ಗಳು ಬರುವಂತೆ ಒತ್ತಾಯ ಮಾಡಿ ದರು. ಈ ಸಂದರ್ಭ ವೀರಾಜಪೇಟೆ ತಹಶೀಲ್ದಾರ್ ಪುರಂದರ ಸ್ಥಳಕ್ಕಾಗಮಿ ಸಿದರು. ಆದರೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಒತ್ತಾಯಿಸಿ ಧರಣಿ ಮುಂದುವರೆಸಿದರು.
ಜಿಲ್ಲಾಧಿಕಾರಿ ಭರವಸೆ
ಬಳಿಕ ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ಸ್ಥಳಕ್ಕಾಗಮಿಸಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿ ಮನವಿಪತ್ರ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ತಾನು ಈಗಾಗಲೇ ಹಲವಾರು ಬಾರಿ ಪ್ರವಾಹಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಜಿಲ್ಲೆಯಲ್ಲಿ 2 ಸಾವಿರ ಮನೆಗಳು ಹಾನಿಯಾಗಿದ್ದು, ಶೇ 80 ರಷ್ಟು ನದಿ ದಡದ ಮನೆಯಾಗಿದೆ. ಈಗಾಗಲೇ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಸರಕಾರಿ ಜಾಗವನ್ನು ಗುರುತಿಸಿದ್ದು, ಎರಡು ತಾಲೂಕಿನ ತಹಶೀಲ್ದಾರರ ಬಳಿ ಜಾಗ ತೆರವುಗೊಳಿಸಲು ಸೂಚಿಸಲಾಗಿದೆ. ಶೀಘ್ರದಲ್ಲಿ ಸಂತ್ರಸ್ತರಿಗೆ ಜಾಗವನ್ನು ಒದಗಿಸುವದಾಗಿ ತಿಳಿಸಿದರು. ಈ ಸಂದರ್ಭ ಸಂತ್ರಸ್ತರು, ಜಾಗ ಒದಗಿಸಲು ಎಷ್ಟು ಸಮಯ ಬೇಕೆಂದು ಪ್ರಶ್ನಿಸಿದ್ದು, ಮುಂದಿನ ಮೂರು ತಿಂಗಳಲ್ಲಿ ಜಾಗ ಒದಗಿಸುವ ಬಗ್ಗೆ ಭರವಸೆಯನ್ನು ನೀಡಿದರು. ಈಗಾಗಲೇ ನೆಲ್ಯಹುದಿಕೇರಿ ಹಾಗೂ ಗುಹ್ಯ ಗ್ರಾಮದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ನೀಡಿರುವ ಪ್ರಮಾಣಪತ್ರದ ಬಗ್ಗೆ ಗೊಂದಲ ನಿರ್ಮಾಣವಾಗಿದ್ದು, ನಮೂನೆ 1 ರಲ್ಲಿ ಸಹಿ ಹಾಕುವ ಅಗತ್ಯವಿಲ್ಲ. ಈ ಬಗ್ಗೆ ಕಂದಾಯ ಪರಿವೀಕ್ಷಕರಿಗೆ ಸೂಚನೆ ನೀಡಿದರು. ನಮೂನೆ 2 ರಲ್ಲಿ ಸಹಿ ಹಾಕಬೇಕು. ಹಾಗಾದಲ್ಲಿ ಅದನ್ನು ಸರಕಾರಕ್ಕೆ ಸಲ್ಲಿಸಿ ಪುನರ್ವಸತಿ ಕಲ್ಪಿಸಲು ಮುಂದಿನ ಕ್ರಮ ಕೈಗೊಳ್ಳಬಹುದು ಎಂದರು. ಪತ್ರದ ಮೂಲಕ ಗೊಂದಲ ಸೃಷ್ಟಿಸುವ ಅಧಿಕಾರಿಗಳು ಹಾಗೂ ಸಂಘಟನೆ ಗಳಿದ್ದಲ್ಲಿ ತನ್ನ ಗಮನಕ್ಕೆ ತರುವಂತೆ ಸೂಚಿಸಿದರು. ತಾತ್ಕಾಲಿಕ ಪರಿಹಾರ ಸಿಗದ ಗುಹ್ಯ, ಕರಡಿಗೋಡುವಿನ ಸುಮಾರು 60 ಕುಟುಂಬಗಳಿಗೆ ಕೂಡಲೇ ರೂ 10 ಸಾವಿರ ಪರಿಹಾರ ನೀಡಲು ತಹಶೀಲ್ದಾರರಿಗೆ ಸೂಚಿಸಿದರು. ಸಂತ್ರಸ್ತರಲ್ಲಿ ಕೆಲವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಅವರಿಗೂ ನಿವೇಶನ ನೀಡುವಂತೆ ಸಮಿತಿಯು ಒತ್ತಾಯಿಸಿದಾಗ ಬಾಡಿಗೆದಾರರ ಪಟ್ಟಿಯನ್ನು ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಂತ್ರಸ್ತರ ದಾಖಲೆಗಳನ್ನು ಕಳೆದುಕೊಂಡಿರುವವರಿಗಾಗಿ ಮುಂದಿನ ವಾರದಲ್ಲಿ ಆಧಾರ್ ಮೊಬೈಲ್ ಕಿಟ್ ಮೂಲಕ ಆಧಾರ್ ಕಾರ್ಡ್ ನೀಡಲಾಗುವದು. ಕೂಡಲೇ ಪಡಿತರ ಚೀಟಿ ಹಾಗೂ ಮತದಾರರ ಗುರುತಿನ ಚೀಟಿ ಒದಗಿಸಲು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಸೂಚನೆ ನೀಡಿದರು.
ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ ಸುಮನ್, ಕಂದಾಯ ಪರಿವೀಕ್ಷಕ ನಾಗೇಶ್ ರಾವ್, ಗ್ರಾಮ ಲೆಕ್ಕಿಗ ಓಮಪ್ಪ ಬಣಕಾರ್, ಅನೀಶ್, ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ಗುಹ್ಯ ಹೋರಾಟ ಸಮಿತಿಯ ಅಧ್ಯಕ್ಷ ಸಿ.ಯು ಮುಸ್ತಫ, ಕರಡಿಗೋಡು ಸಮಿತಿಯ ಕೃಷ್ಣ, ಗ್ರಾ.ಪಂ ಸದಸ್ಯರಾದ ಪ್ರತಿಮ, ಶೈಲ, ಶಿವಕುಮಾರ್, ಅಬ್ದುಲ್ ಖಾದರ್, ಪೂವಮ್ಮ, ಶೀಲ, ಸರೋಜ, ಕರ್ಪಯ್ಯ, ಶೌಕತ್ ಆಲಿ, ಎ.ಎಸ್ ಹುಸೈನ್, ಓ.ಡಿ.ಪಿ ಸಂಸ್ಥೆಯ ಪದಾಧಿಕಾರಿಗಳು, ಎಚ್.ಆರ್.ಎಸ್ ನ ಕುಞÁನ್, ಬಷೀರ್ ಸೇರಿದಂತೆ ಇನ್ನಿತರರು ಇದ್ದರು. ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಠಾಣಾಧಿಕಾರಿ ದಯಾನಂದ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
-ಚಿತ್ರ, ವರದಿ : ಎ.ಎನ್ ವಾಸು