ಚೆಟ್ಟಳ್ಳಿ, ಅ. 1: ದಸರಾ ಮಹೋತ್ಸವ ನಡೆಯುತ್ತಿರುವ ಹಿನ್ನೆಲೆ ಮೈಸೂರು ಜಿಲ್ಲೆಗೆ ಆಗಮಿಸುವ ಅಂತರರಾಜ್ಯ ಪ್ರವಾಸಿ ವಾಹನಗಳಿಗೆ ಸರ್ಕಾರ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿದ್ದು, ಕೊಡಗಿಗೆ ಆಗಮಿಸುವ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡದೇ ಕೊಡಗನ್ನು ಕಡೆಗಣಿಸಿದೆ ಎಂದು ಆರೋಪಿಸಿ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ವರ್ತಕರು ಎನ್.ಟಿ.ಸಿ ಆವರಣದಲ್ಲಿ ಎನ್.ಟಿ.ಸಿ. ವ್ಯವಸ್ಥಾಪಕ ಹಕೀಂ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಮಹಾಮಳೆಯಿಂದಾಗಿ ಸತತ ಎರಡು ವರ್ಷ ಪ್ರವಾಹಕ್ಕೆ ತುತ್ತಾದ ಕೊಡಗಿನ ವ್ಯಾಪಾರೋದ್ಯಮ ಹಾಗೂ ಪ್ರವಾಸೋದ್ಯಮ ಸಂಪೂರ್ಣವಾಗಿ ನೆಲಕಚ್ಚಿದ್ದು, ಈ ಸಂದರ್ಭ ಕೊಡಗಿಗೆ ಆಗಮಿಸುವ ಪ್ರವಾಸಿ ವಾಹನಗಳಿಗೆ ಸರ್ಕಾರ ತೆರಿಗೆ ವಿನಾಯಿತಿ ನೀಡದೇ ತಾರತಮ್ಯ ತೋರುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಹಾಗೂ ಉಸ್ತುವಾರಿ ಸಚಿವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಎನ್.ಟಿ.ಸಿ ವರ್ತಕರಾದ ಸಂಜೀವ್, ಸಲೀಂ, ಪ್ರವೀಣ್, ಕಬೀರ್, ಗಣೇಶ್, ಬಿನೀಶ್, ನಾಸಿರ್, ಸರಿಹರ್, ನಾಗರಾಜ್, ಇಮ್ರಾನ್, ಮುರುಳಿ ಅಂಚೆಮನೆ, ಲೋಕೇಶ್ ಹಾಗೂ ಇನ್ನಿತರ ಎನ್.ಟಿ.ಸಿ ವರ್ತಕರು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.