ಗೋಣಿಕೊಪ್ಪಲು, ಸೆ. 29: ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾನಿಲಯದಲ್ಲಿ ರೋಟ್ರೆಕ್ಸ್ ಕ್ಲಬ್ನ ಪದಗ್ರಹಣ ಸಮಾರಂಭವು ನಡೆಯಿತು. ರೋಟ್ರೆಕ್ಸ್ ಕ್ಲಬ್ನ ನೂತನ ಅಧ್ಯಕ್ಷರಾಗಿ ರೋಟೇರಿಯನ್ ನಿತೀನ್, ಪಿ.ಎಸ್. ಕಾರ್ಯದರ್ಶಿಯಾಗಿ ಸೌಂದರ್ಯ ಆರ್.ವಿ. ಆಯ್ಕೆಗೊಂಡರು. ಗೋಣಿಕೊಪ್ಪಲು ವಿನ ರೋಟರಿ ಕ್ಲಬ್ನ ಅಧ್ಯಕ್ಷ ರೋಟೇರಿಯನ್ ಕೆ.ಬಿ. ನೇವಿನ್ ಪದಗ್ರಹಣ ಸಮಾರಂಭವನ್ನು ನಡೆಸಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಕಾಲೇಜಿನ ಡೀನ್ ಡಾ. ಸಿ.ಜೆ. ಕುಶಾಲಪ್ಪ ಮತ್ತು ಡಾ. ರಾಮಕೃಷ್ಣ ಹೆಗ್ಗಡೆಯವರು ಭಾಗವಹಿಸಿದ್ದರು. ಹಾಗೂ ರೋಟರಿ ಸಂಸ್ಥೆಯ ಕಾರ್ಯದರ್ಶಿ ಟಿ.ಬಿ. ಪೂಣಚ್ಚ, ಖಜಾಂಚಿ ಅಜ್ಜಿಕುಟ್ಟೀರ ಸಜನ್ ಚಂಗಪ್ಪ, ಡಾ. ಚಂದ್ರಶೇಖರ್, ವಾಸು ಉತ್ತಪ್ಪ, ಪಿ.ಬಿ. ಪೂಣಚ್ಚ, ಪ್ರಮೋದ್ ಕಾಮತ್ ಮುಂತಾದವರು ಭಾಗವಹಿಸಿದ್ದರು.