ವೀರಾಜಪೇಟೆ, ಸೆ. 29: ವೀರಾಜಪೇಟೆಯ ಮೀನುಪೇಟೆಯ ಮರಿಯಾ ಎಚ್.ಎಂ. ರಾಯಲ್ ಪರ್ಲ್ ಅಪಾರ್ಟ್‍ಮೆಂಟ್‍ನ ನಾಲ್ಕನೇ ಮಹಡಿಯಿಂದ ಆಟವಾಡುತ್ತಿದ್ದ ಜಲಾಲುದ್ದೀನ್ (2) ಎಂಬ ಮಗು ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.ಇದಯತುಲ್ಲಾ-ಜಾಹೀರಾ ದಂಪತಿಯ ಮಗನಾದ ಜಲಾಲುದ್ದೀನ್ ಬೆಳಿಗ್ಗೆ 11.30ರ ಸಮಯದಲ್ಲಿ ನೆರೆ ಮನೆಯ ನಾಲ್ಕುವರ್ಷದ ಮಗುವಿನೊಂದಿಗೆ ಆಟವಾಡುತಿದ್ದಾಗ ಬಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದ ಮಗುವನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ ವೇಳೆ ಸಾವನ್ನಪ್ಪಿರುವದಾಗಿ ಗೊತ್ತಾಗಿದೆ.ರಾಯಲ್ ಪರ್ಲ್‍ನ ವಾಣಿಜ್ಯ ಕಟ್ಟಡಕ್ಕೆ ನಾಲ್ಕು ಅಂತಸ್ತ್ತುಗಳಿದ್ದು ನಾಲ್ಕನೇ ಅಂತಸ್ತಿನಲ್ಲಿ ಜಾಹೀರಾ ಮನೆಯನ್ನು ಬಾಡಿಗೆಗೆ ಪಡೆದು ವಾಸವಾಗಿದ್ದರು. ಮಗುವಿನ ತಂದೆ ಇದÀಯತುಲ್ಲಾ ದುಬೈನಲ್ಲಿ ಉದ್ಯೋಗದಲ್ಲಿರುವದಾಗಿ ಪೊಲೀಸರು ತಿಳಿಸಿದ್ದಾರೆ. ಮಗುವಿನ ಆಕಸ್ಮಿಕ ಸಾವಿನ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.