ಮಡಿಕೇರಿ, ಸೆ. 29: ಮಡಿಕೇರಿಯ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಸ್ಟೋರ್ಸ್‍ನ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಗರದ ಬಾಲ ಭವನದಲ್ಲಿ ಅಧ್ಯಕ್ಷ ನಂದಿನೆರವಂಡ ರವಿ ಬಸಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ 480 ಬಿಡು ಸದಸ್ಯರು ಹಾಗೂ 25 ಸಹಕಾರ ಸಂಘಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಸಂಘದ ಕಾರ್ಯಚಟುವಟಿಕೆಗಳು, ಮುಂದಿನ ಯೋಜನೆಗಳ ಕುರಿತಾಗಿ ಚರ್ಚೆ ನಡೆಯಿತು.

ಸಂಘದ ವಹಿವಾಟು ಹಾಗೂ ಪ್ರಸಕ್ತ ಸಾಲಿನ ಲಾಭಾಂಶದ ಕುರಿತು ಸಭೆಗೆ ಮಾಹಿತಿ ನೀಡಲಾಯಿತು. ಸದಸ್ಯತ್ವ ಶುಲ್ಕವನ್ನು ರೂ. 100 ರಿಂದ ರೂ. 1 ಸಾವಿರಕ್ಕೆ ಹೆಚ್ಚಳ ಮಾಡಿರುವ ಬಗ್ಗೆ ಮಾಹಿತಿ ನೀಡಲಾಯಿತು. ಉಪಾಧ್ಯಕ್ಷ ಕೆ.ಆರ್. ಧರ್ಮಪಾಲ್ ಸೇರಿದಂತೆ ನಿರ್ದೇಶಕರು, ವ್ಯವಸ್ಥಾಪಕಿ ಬಿ.ಕೆ. ರೂಪ ಮತ್ತಿತರರು ಪಾಲ್ಗೊಂಡಿದ್ದರು.