ಮಡಿಕೇರಿ, ಸೆ. 29: ಅಮ್ಮತ್ತಿಯ ಶ್ರೀ ಬಸವೇಶ್ವರ ದೇವಾಲಯ ಆಡಳಿತ ಮಂಡಳಿ ವಿರುದ್ಧ ವ್ಯಕ್ತಿಯೊಬ್ಬರು ಹೂಡಿದ್ದ ದಾವೆಗೆ ಸಂಬಂಧಿಸಿದಂತೆ ನ್ಯಾಯಾಲಯ ದೇವಾಲಯ ಆಡಳಿತ ಮಂಡಳಿ ಪರವಾಗಿ ತೀರ್ಪು ನೀಡಿದೆ.

ಅಮ್ಮತ್ತಿ ಬಸವೇಶ್ವರ ದೇವಾಲಯಕ್ಕೆ ಸೇರಿದ ವಾಣಿಜ್ಯ ಮಳಿಗೆಯಲ್ಲಿ ಅಂಗಡಿ ನಡೆಸುತ್ತಿದ್ದ ಸಿ.ಯು. ದೇವಯ್ಯ ಎಂಬವರು ಅಂಗಡಿ ಮಳಿಗೆ ಬಾಡಿಗೆಯನ್ನು ದೇವಾಲಯ ಸಮಿತಿ ಹೆಚ್ಚಳ ಮಾಡಿದ್ದರ ವಿರುದ್ಧ 2016ರಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು; ದೇವಯ್ಯ ಅವರು ಅಂಗಡಿಯನ್ನು ಕೂಡಲೇ ತೆರವುಗೊಳಿಸಬೇಕು. ತೆರವು ಗೊಳಿಸುವವರೆಗಿನ ಪೂರ್ಣ ಬಾಡಿಗೆ, ಹೆಚ್ಚಳ ಮಾಡಲಾದ ಬಾಡಿಗೆ ಹಣ ಹಾಗೂ ನ್ಯಾಯಾಲಯದ ಖರ್ಚುವೆಚ್ಚವನ್ನು ಬಸವೇಶ್ವರ ದೇವಾಲಯ ಆಡಳಿತ ಮಂಡಳಿಗೆ ಪಾವತಿಸಬೇಕೆಂದು ಸೂಚಿಸಿದೆ.