ಮಡಿಕೇರಿ, ಸೆ. 29: ರಾಜದಾನಿ ಬೆಂಗಳೂರಿನಲ್ಲಿರುವ ತಿಪ್ಪೆಸಂದ್ರ ವ್ಯಾಪ್ತಿಯ ತಿಪ್ಪೆಸಂದ್ರ ಸ್ನೇಹಕೂಟದ ವತಿಯಿಂದ ವಾರ್ಷಿಕವಾಗಿ ನಡೆಸಲಾಗುವ ಕೈಲ್‍ಪೊಳ್ದ್ ಹಬ್ಬದ ಸಂತೋಷಕೂಟ ಹಾಗೂ ಇತರ ಕಾರ್ಯಕ್ರಮಗಳು ಇತ್ತೀಚೆಗೆ ಬೆಂಗಳೂರು ಕೊಡವ ಸಮಾಜದಲ್ಲಿ ಜರುಗಿತು.

ಅಲ್ಲಿನ ಫೀ.ಮಾ. ಕಾರ್ಯಪ್ಪ ಸಭಾಂಗಣದಲ್ಲಿ ಸಂಭ್ರಮದಿಂದ ನಡೆದ ಕಾರ್ಯಕ್ರಮದಲ್ಲಿ ಆಯುಧ ಪೂಜೆ, ಕ್ರೀಡಾ ಚಟುವಟಿಕೆ, ಸಾಂಸ್ಕøತಿಕ ಚಟುವಟಿಕೆಗಳು ಜರುಗಿದವು. ಕೂಟದ ಅಧ್ಯಕ್ಷ ಕಲ್ಮಾಡಂಡ ಟಾಟ ಚೀಯಣ್ಣ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ನಿವೃತ್ತ ಲೆಫ್ಟಿನೆಂಟ್ ಬಟ್ಟಿಯಂಡ ಕೆ. ನಂಜಪ್ಪ ಪಾಲ್ಗೊಂಡು ಮಾತನಾಡಿದರು.

ಉಮ್ಮತ್ತಾಟ್, ವಾಲಗತ್ತಾಟ್, ಕೊಡಗಿನ ಆಹಾರ ಪದ್ಧತಿಯ ಆಕರ್ಷಣೆ, ಹಾಡುಗಾರಿಕೆ ಗಮನ ಸೆಳೆಯಿತು. ಸ್ನೇಹಕೂಟದ ಉಪಾಧ್ಯಕ್ಷ ಅಲ್ಲಾರಂಡ ಬೊಳ್ಳು ಮಂದಣ್ಣ, ಕಾರ್ಯದರ್ಶಿ ತಂಬುಕುತ್ತೀರ ಮಾಚಯ್ಯ, ಖಜಾಂಚಿ ಪೆಬ್ಬಟ್ಟಿರ ಪ್ರೀತ ಬೋಪಣ್ಣ, ಕ್ರೀಡಾ ಕಾರ್ಯದರ್ಶಿ ಬೊಳ್ಳಂಡ ರೋಷನ್, ಸಾಂಸ್ಕøತಿಕ ಕಾರ್ಯದರ್ಶಿ ಬಯವಂಡ ಸವಿತಾ ಬೆಳ್ಯಪ್ಪ, ಸಂಘಟನಾ ಕಾರ್ಯದರ್ಶಿ ಚೈಯ್ಯಂಡ ಕಟ್ಟಿ ಮುತ್ತಪ್ಪ, ಸಲಹಾ ಕಾರ್ಯದರ್ಶಿ ಕೋಡಿಮಣಿಯಂಡ ವಿಜಯಕುಮಾರ್, ಕುಯಿಮಂಡ ಮಮತಾ ಮೇದಪ್ಪ ಮತ್ತಿತರರು ಪಾಲ್ಗೊಂಡಿದ್ದರು.