ಗೋಣಿಕೊಪ್ಪ ವರದಿ, ಸೆ. 29 : ಎಲ್ಲರನ್ನು ಒಟ್ಟಾಗಿ ಕೊಂಡೊಯ್ಯುವದು ಹಿಂದೂ ಸಂಸ್ಕøತಿಯ ಮೂಲ ಧ್ಯೇಯಗಳಲ್ಲಿ ಒಂದಾಗಿದೆ. ಇದರ ಪಾಲನೆಯಾಗಬೇಕು ಎಂದು ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.
ಭಾನುವಾರ ಪರಿಮಳ ಮಂಗಳ ವಿಹಾರ ಸಭಾಂಗಣದಲ್ಲಿ ಆಯೋಜಿಸಿದ್ದ ಕೊಡಗು ಹಿಂದೂ ಮಲಯಾಳಿ ಸಮಾಜವನ್ನು ಉದ್ಘಾಟನೆಗೊಳಿಸಿ ಅವರು ಮಾತನಾಡಿ, ಧರ್ಮವನ್ನು ಸಮಾನತೆಯ ಮೂಲಕ ಮೈಗೂಡಿಸಿಕೊಂಡಾಗ ಸಮಾಜದಲ್ಲಿ ಭಾವೈಕ್ಯತೆಯ ಭಾವನೆ ಮೂಡುತ್ತದೆ. ಧರ್ಮದಲ್ಲಿ ನಮ್ಮದೇ ಶ್ರೇಷ್ಟ ಎಂದು ಭಾವಿಸಿದಾಗ ಘರ್ಷಣೆಗಳು ಹೆಚ್ಚಾಗುತ್ತದೆ. ಇದರ ನಿಯಂತ್ರಣಕ್ಕೆ ಸಮಾನತೆಗೆ ಹೆಚ್ಚು ಒತ್ತು ನೀಡಬೇಕು ಎಂದರು. ಮಡಿಕೇರಿ ಪಂಚಾಯಿತಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ಮಾತನಾಡಿ, ಪ್ರತಿಯೊಬ್ಬರಿಗೂ ತಮ್ಮ ಭಾಷೆಯ ಮೇಲೆ ಪ್ರೀತಿ ಇರಬೇಕು ಎಂದರು.
ಕೊಡಗು ಪ್ರೆಸ್ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಪ್ರತಿಯೊಂದು ಜನಾಂಗವು ತನ್ನದೇ ಆಚಾರ ವಿಚಾರ, ಉಡುಗೆ ತೊಡುಗೆ ಸಂಸ್ಕøತಿಯನ್ನು ಹೊಂದಿದೆ. ಒಂದು ಜನಾಂಗವು ಮತ್ತೊಂದು ಜನಾಂಗದ ಆಚರಣೆಗಳ ಬಗ್ಗೆ ಕುತೂಹಲವನ್ನು ಬೆಳೆಸಿಕೊಂಡರೆ ಮಾತ್ರ ಸಾಮರಸ್ಯ ಮೂಡಲು ಸಾಧ್ಯ ಎಂದರು. ಮಲಯಾಳಿ ಸಮಾಜದ ಕಾನೂನು ಸಲಹೆಗಾರ ಕೆ.ಬಿ ಸಂಜೀವ್ ಪ್ರಾಸ್ತಾವಿಕ ನುಡಿಯಾಡಿದರು.
ಕೊಡಗು ಹಿಂದೂ ಮಲೆಯಾಳಿ ಸಮಾಜ ಅಧ್ಯಕ್ಷ ಪಿ. ಎಸ್. ಶರತ್ಕಾಂತ್ ಮಾತನಾಡಿ, ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನಕ್ಕೆ ಸಾಕಷ್ಟು ಯಶಸ್ಸು ಸಿಕ್ಕಿದೆ. ಈಗಿರುವ 412 ಕುಟುಂಬ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.
ಈ ಸಂದರ್ಭ ನಿ. ಶಿಕ್ಷಕಿ ಎಂ. ಕೆ. ಶ್ಯಾಮಲಾ, ಕೊಡಗು ಹಿಂದೂ ಮಲೆಯಾಳಿ ಸಮಾಜ ಗೌರವ ಅಧ್ಯಕ್ಷ ಪಿ. ಭಾಸ್ಕರನ್, ಪ್ರ. ಕಾರ್ಯದರ್ಶಿ ವಿ. ವಿ. ಅರುಣ್ಕುಮಾರ್, ಎಸ್ಎನ್ಡಿಪಿ, ಗೋಣಿಕೊಪ್ಪ ಶಾಖೆ ಅಧ್ಯಕ್ಷ ಕೆ. ಜೆ. ಜಯೇಂದ್ರ, ಕೆಎನ್ಎಸ್ಎಸ್, ಗೋಣಿಕೊಪ್ಪ ಶಾಖೆ ಅಧ್ಯಕ್ಷ ಪಿ. ಇ. ಪವಿತ್ರನ್, ವಿಶ್ವಕರ್ಮ ಸಮಾಜ, ಗೋಣಿಕೊಪ್ಪ ಘಟಕ ಅಧ್ಯಕ್ಷ ಕೆ. ಎ. ವಿನೋದ್, ಮಲಯಾಳಿ ಸಮಾಜದ ಪಾಲಿಬೆಟ್ಟ ಘಟಕ ಅಧ್ಯಕ್ಷ ವಿ. ಬಿ. ರಿನೀಶ್, ಶ್ರೀಮಂಗಲ ಶಾಖೆ ಅಧ್ಯಕ್ಷ ಎಂ. ಎಸ್. ಮುರುಳಿ ಮೋಹನ್ ಉಪಸ್ಥಿತರಿದ್ದರು.
ಸನ್ಮಾನ : ಸಾಮಾಜಿಕ, ಶೈಕ್ಷಣಿಕ, ಕ್ರೀಡೆಯಲ್ಲಿ ಸಾಧನೆ ಮಾಡಿದ ಸಮಾಜದ ಸದಸ್ಯರಿಗೆ ಸನ್ಮಾನ ನಡೆಯಿತು. ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಎಂ. ಟಿ. ಶೃತಿ, ಕೆ.ಪಿ. ಅಶ್ವಿನ್, ಎ. ಎಸ್. ಮನೀಶಾ, ಕೆ. ಆರ್. ಸ್ನೇಹಾ, ಕೆ. ವಿ. ತ್ರಿಶನ್, ಟಿ. ಪಿ. ಚೈತನ್ಯಾ ಅವರುಗಳನ್ನು ಗೌರವಿಸಲಾಯಿತು. ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಎಂ. ಎಂ. ಗ್ರೀಷ್ಮಾ, ಪಿ. ಎಂ. ಅಕ್ಷಯ್, ಎಂ.ಕೆ ಲತೀಶ್, ಅಥ್ಲೆಟ್ನಲ್ಲಿ ರಾಜ್ಯ ಮಟ್ಟ ಪ್ರತಿನಿಧಿಸಿರುವ ಸಿ.ಬಿ. ರಶ್ಮಿ, ಬಾಲ್ ಬಾಡ್ಮಿಂಟನ್ ರಾಜ್ಯಮಟ್ಟ ಪ್ರತಿನಿಧಿಸಿರುವ ಕೆ.ಸಿ. ಆಕಾಶ್, ಫುಟ್ಬಾಲ್ ಪ್ರತಿಭೆ ಟಿ.ವಿ. ಆದಿತ್ಯನ್ ಅವರನ್ನು ಗೌರವಿಸಲಾಯಿತು. ಶೀಲಾ ವೇಣುಗೋಪಾಲ್ ಶಿವ ನೃತ್ಯದ ಮೂಲಕ ಸ್ವಾಗತಿಸಿದರು. ಅಯ್ಯಪ್ಪ ಪ್ರಾರ್ಥಿಸಿದರು. ಸುಬ್ರಮಣಿ ಸ್ವಾಗತಿಸಿದರು. ಜ್ಯೋತಿ ಅರುಣ್ಕುಮಾರ್ ನಿರೂಪಿಸಿದರು. -ಸುದ್ದಿಮನೆ