ಮಡಿಕೇರಿ, ಸೆ. 29: ವೀರಾಜಪೇಟೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರಸ್ಥರ ನಿಯಂತ್ರಣ) ನಿಯಮಗಳು 2019, ಅನುಷ್ಠಾನಗೊಳಿಸುವ ಸಂಬಂಧ ವೀರಾಜಪೇಟೆ, ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳ ಪಟ್ಟಿಯನ್ನು ಪಟ್ಟಣ ಪಂಚಾಯಿತಿ ಕಾರ್ಯಾಲಯದ ಸೂಚನಾ ಘಲಕಕ್ಕೆ ಅಳವಡಿಸಲಾಗಿತ್ತು ಹಾಗೂ ವ್ಯಾಪಾರಸ್ಥರು/ ಸಾರ್ವಜನಿಕರಿಂದ ಏನಾದರೂ ಆಕ್ಷೇಪಣೆ ಇದ್ದಲ್ಲಿ ತಾ. 23 ರೊಳಗೆ ಆರ್ಹ ದಾಖಲಾತಿಗಳೊಂದಿಗೆ ಸಲ್ಲಿಸಲು ಸೂಚಿಸಲಾಗಿತ್ತು.

ಈ ಅವಧಿಯಲ್ಲಿ ಯಾವದೇ ಆಕ್ಷೇಪಣೆಗಳು ಸ್ವೀಕೃತಗೊಂಡಿರುವದಿಲ್ಲ ಆದ್ದರಿಂದ ಈಗಾಗಲೇ ಪ್ರಚುರಪಡಿಸಿರುವ ತಾತ್ಕಾಲಿಕ ಪಟ್ಟಿಯನ್ನು ಅಂತಿಮ ಪಟ್ಟಿಯಾಗಿ ಪ್ರಕಟಿಸಿ ಕಚೇರಿ ಸೂಚನಾ ಫಲಕದಲ್ಲಿ ಸಾರ್ವಜನಿಕ ಬೀದಿ ಬದಿ ವ್ಯಾಪಾರಿಗಳ ಮಾಹಿತಿಗಾಗಿ ಅಳವಡಿಸಿದೆ ಎಂದು ವೀರಾಜಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ ತಿಳಿಸಿದ್ದಾರೆ.