ಮಡಿಕೇರಿ, ಸೆ. 29: ನಗರದ ಸಂತ ಮೈಕಲರ ಚರ್ಚ್‍ನ ವಾರ್ಷಿಕ ಮಹೋತ್ಸವ ಧರ್ಮ ಗುರುಗಳಾದ ಆಲ್ಫ್ರೆಡ್ ಜಾನ್ ಮೆಂಡೊನ್ಸ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.
ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಚಿಕ್ಕಮಗಳೂರು ಮರಿಯ ನಗರ ಧರ್ಮ ಗುರುಗಳಾದ ಪೌಲ್ ಡಿಸೋಜ ಅವರು ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಬಳಿಕ ಸಂತ ಮೈಕಲರ ಮೂರ್ತಿಯ ಮೆರವಣಿಗೆ ನಡೆಯಿತು.