ಗುಡ್ಡೆಹೊಸೂರು, ಸೆ. 29: ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಅಂಕನಹಳ್ಳಿ ಗ್ರಾಮದ ನಿವಾಸಿ ರಮೇಶ ಎಂಬಾತ ಅಕ್ರಮವಾಗಿ ಸುಮಾರು ಒಂದು ಲಕ್ಷ ಮೌಲ್ಯದ ಮರಗಳನ್ನು ತನ್ನ ಗೂಡ್ಸ್ ವಾಹನ (ಕೆ.ಎ.12.ಬಿ.198)ದಲ್ಲಿ ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖಾಧಿಕಾರಿಗಳು ಬಂಧಿಸಿದ್ದಾರೆ.
ಕೊಡಗು ಜಿಲ್ಲಾ ಸಂಚಾರಿದಳದ ಉಪ ಅರಣ್ಯಾಧಿಕಾರಿ ಸಿ.ಜಿ. ಕಾರ್ಯಪ್ಪ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿಗಳಾದ ದೇವಯ್ಯ, ಉಪವಲಯ ಅರಣ್ಯಾಧಿಕಾರಿ ಎ.ಪಿ. ಗಣಪತಿ, ಸುನೀಲ್, ವಿಕ್ರಮ್ ಹಾಗೂ ವಾಹನ ಚಾಲಕ ಪ್ರವೀಣ್ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು.
-ಗಣೇಶ್