ಗೋಣಿಕೊಪ್ಪಲು, ಸೆ. 28: 41ನೇ ವರ್ಷದ ಗೋಣಿಕೊಪ್ಪ ದಸರಾ ಜನೋತ್ಸವಕ್ಕೆ ಶ್ರೀ ಕಾವೇರಿ ದಸರಾ ಸಮಿತಿ ಸಕಲ ಸಿದ್ದತೆ ನಡೆಸಿದ್ದು, ತಾ. 29ರಂದು (ಇಂದು) ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪೂಜೆ ಸಲ್ಲಿಸುವದರ ಮೂಲಕ ಚಾಲನೆ ದೊರೆಯಲಿದೆ.ಶಾಸಕ ಕೆ.ಜಿ. ಬೋಪಯ್ಯ ಅವರ ಉಪಸ್ಥಿತಿಯಲ್ಲಿ ಪೆÇನ್ನಂಪೇಟೆ ಶ್ರೀ ರಾಮಕೃಷ್ಣ ಮಠದ ಸ್ವಾಮಿಜೀ ಪರಹಿತಾನಂದಾ ಮಹಾರಾಜ್ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಲಿದ್ದಾರೆ. ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮ, 8 ಗಂಟೆಗೆ ದೇವಿ ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ. ರಾಜ್ಯ ಸರ್ಕಾರ ರೂ. 30 ಲಕ್ಷ ಅನುದಾನ ಬಿಡುಗಡೆ ಮಾಡಿದ್ದು, ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸುಮಾರು ರೂ. 8 ಲಕ್ಷದ ವೆಚ್ಚದ 160 ಅಡಿಯ ಉದ್ದ ಹಾಗೂ 80 ಅಡಿ ಅಗಲದ ವೇದಿಕೆ ಹಾಗೂ ಸಭಾಂಗಣವನ್ನು ನಿರ್ಮಿಸಲಾಗಿದೆ.ಸುಮಾರು 2000ಕ್ಕೂ ಹೆಚ್ಚು ಆಸನಗಳನ್ನು ಅಳವಡಿಸಲಾಗಿದೆ. ವೇದಿಕೆಯ ಬದಿಯಲ್ಲಿ ಚಾಮುಂಡೇಶ್ವರಿ ಮೂರ್ತಿ ಪ್ರತಿಷ್ಠಾಪಿಸಲು ದೇವರ ಮಂಟಪ ನಿರ್ಮಾಣಗೊಂಡಿದೆ. ಶ್ರೀ ಕಾವೇರಿ ಕಲಾ ವೇದಿಕೆಯಲ್ಲಿ ಹತ್ತು ದಿನ ಮನರಂಜನೆಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 6 ರಿಂದ 7ರ ತನಕ ಸ್ಥಳೀಯ ಪ್ರತಿಭೆಗಳ ಪ್ರದರ್ಶನ ಅನಾವರಣಗೊಳ್ಳಲಿದೆ. ನಂತರ ಸಭಾ ಕಾರ್ಯಕ್ರಮ, ತದನಂತರ ಸಾಂಸ್ಕøತಿಕ ರಸಮಂಜರಿ ನಡೆಯಲಿದೆ. ಈ ಬಾರಿ ದಸರಾ ಆಚರಣೆಯಲ್ಲಿ ವಿಶೇಷವಾಗಿ ಅಕ್ಟೋಬರ್ 4ರಂದು ಮಹಿಳಾ ದಸರಾ, 6 ರಂದು ಮಕ್ಕಳ ದಸರಾ, 2ರಂದು ಯುವ ದಸರಾ ಹಾಗೂ ಕವಿಗೋಷ್ಠಿ, 5ರಂದು ಡರ್ಟ್ ಟ್ರ್ಯಾಕ್ ರ್ಯಾಲಿ ಮನೆಯಪಂಡ ಯಾರ್ಡ್‍ನಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯತನಕ ನಡೆಯಲಿದೆ. 8 ರಂದು ರಾತ್ರಿ ದಶಮಂಟಪಗಳ ಭವ್ಯ ಶೋಭಾಯಾತ್ರೆಯೊಂದಿಗೆ ದಸರಾ ಉತ್ಸವ ಕೊನೆಗೊಳ್ಳಲಿದೆ.

ದಸರಾದ ಪ್ರಮುಖ ಆಕರ್ಷಣೆ ಶೋಭಾಯಾತ್ರೆಯಲ್ಲಿ ಕಾವೇರಿ ದಸರಾ ಸಮಿತಿ, ಕಾಡ್ಲಯ್ಯಪ್ಪ ದಸರಾ ಸಮಿತಿ, ಹರಿಶ್ಚಂದ್ರಪುರ ನಮ್ಮ ದಸರಾ ಸಮಿತಿ, ಶಾರದಾಂಭ ದಸರಾ ಸಮಿತಿ, ನಾಡಹಬ್ಬ ಸಮಿತಿ, ಸರ್ವರ ದಸರಾ ಸಮಿತಿ, ನವಚೇತನ ದಸರಾ ಸಮಿತಿ, ಯುವ ದಸರಾ ಸಮಿತಿ, ಕೈಕೇರಿಯ ಭಗವತಿ ಹಾಗೂ ಸ್ನೇಹಿತರ ಬಳಗ ಕೊಪ್ಪ ಸಮಿತಿಗಳು ಪಾಲ್ಗೊಳ್ಳಲಿವೆ. ದಶಮಂಟಪಗಳ

(ಮೊದಲ ಪುಟದಿಂದ) ಶೋಭಯಾತ್ರೆಯಲ್ಲಿ ಉತ್ಸವ ಸಮಿತಿಯಿಂದ ಹೊರತರ ಲಾಗುವ ಕಲಾಕೃತಿ ಎಲ್ಲರಿಗಿಂತಲೂ ವಿಭಿನ್ನವಾಗಿರಬೇಕೆಂಬ ಬಯಕೆ, ತುಡಿತ ಸಮಿತಿಗಳದ್ದಾಗಿದ್ದು, ಇದಕ್ಕಾಗಿ ರಾತ್ರಿ ಹಗಲೆನ್ನದೆ ಎಲ್ಲಾ ಸಮಿತಿಗಳು ಕಾರ್ಯ ನಿರ್ವಹಿಸುತ್ತಿವೆ.

ಸ್ತಬ್ದ ಚಿತ್ರ : ಅ. 7 ರಂದು ಮಧ್ಯಾಹ್ನ ನಡೆಯುವ ಸ್ತಬ್ದಚಿತ್ರ ಮೆರವಣಿಗೆ ದಸರಾದ ಆಕರ್ಷಣೆಯಲ್ಲೊಂದಾಗಿದ್ದು, ವಿಭಿನ್ನ ಕಲಾಕೃತಿಗಳು ಪ್ರದರ್ಶನಗೊಳ್ಳುವ ನಿರೀಕ್ಷೆ ನಾಡಹಬ್ಬ ಸಮಿತಿಗಳದ್ದಾಗಿದೆ.

ದಸರಾ ಉತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ನಡೆಸಲು ಈಗಾಗಲೇ ತಯಾರಿ ನಡೆದಿದೆ ಎಂದು ಕಾವೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಕೆ.ಪಿ. ಬೋಪಣ್ಣ, ಅಧ್ಯಕ್ಷ ಕೆ.ಜಿ. ರಾಮಕೃಷ್ಣ, ಕಾರ್ಯದರ್ಶಿ ಜಿಮ್ಮಿ ಸುಬ್ಬಯ್ಯ ತಿಳಿಸಿದ್ದಾರೆ. -ಚಿತ್ರ ವರದಿ : ಎನ್.ಎನ್ ದಿನೇಶ್