ಗೋಣಿಕೊಪ್ಪ ವರದಿ, ಸೆ. 28: ಭಾರತ ದೇಶದ ನೈಜ ಚರಿತ್ರೆಯನ್ನು ಪಠ್ಯದಲ್ಲಿ ನೀಡುವ ಮೂಲಕ ಸಮಾಜ ದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದು ಭಾರತೀಯ ಜನತಾ ಪಾರ್ಟಿಯ ಸಂಪನ್ಮೂಲ ವ್ಯಕ್ತಿಯಾಗಿರುವ ರವಿ ಅಭಿಪ್ರಾಯಪಟ್ಟರು.

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ವೀರಾಜ ಪೇಟೆ ಮಂಡಲ ಬಿಜೆಪಿ ವತಿಯಿಂದ ಆಯೋಜಿಸಿದ್ದ ಒಂದು ದೇಶ, ಒಂದು ಸಂವಿಧಾನ ಎಂಬ ಕಾರ್ಯಕ್ರಮದಲ್ಲಿ ಕಾಶ್ಮೀರದ ಬಗ್ಗೆ ಮಾಹಿತಿ ನೀಡಿದರು.

ಕಾಶ್ಮೀರ ಭಾರತ ದೇಶದ ಸಂಸ್ಕøತಿಯನ್ನು ಬಿಂಬಿಸುವ ಕೇಂದ್ರವಾಗಿತ್ತು. ಸಾಕಷ್ಟು ಹಿಂದೂ ದೇವಾಲಯಗಳ ಪುಣ್ಯಭೂಮಿ ಯಾಗಿದ್ದರೂ ಕೂಡ, ಇದನ್ನು ತಿರುಚಿ ಪಠ್ಯದಲ್ಲಿ ಬೇರೆಯದೇ ರೀತಿಯಲ್ಲಿ ಬಿಂಬಿಸಲಾಗಿದೆ. ಇದರಿಂದ ಭಾರತ ದೇಶಕ್ಕೂ ಕಾಶ್ಮೀರಕ್ಕೂ ಸಂಬಂದವೇ ಇಲ್ಲ ಎಂದು ನಂಬುವಂತೆ ಮಾಡಿದೆ. ಸಮಾಜಕ್ಕೆ ಕಾಶ್ಮೀರದ ಬಗ್ಗೆ ನೈಜತೆ ಅರಿವಾಗಿಸಲು ಪಠ್ಯದಲ್ಲಿ ನೈಜತೆ ಚಿತ್ರಣ ನೀಡಬೇಕು. ಇಂತಹ ಆಶಾಭಾವನೆ ಇದೆ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಪ್ರಮುಖ ಐನಂಡ ಜಪ್ಪು ಮಾತನಾಡಿ, ಜವಾಹರ ಲಾಲ್ ನೆಹರು ಅವರ ಕುತಂತ್ರದಿಂದ ದೇಶ ಕಳೆದುಕೊಂಡಿದ್ದ ಕಾಶ್ಮೀರವನ್ನು ಮತ್ತೆ ಪಡೆದಿರುವದು ದೇಶದ ಪೌರಾಣಿಕ, ಸಾಂಸ್ಕøತಿಕ ಕೇಂದ್ರ ಮರಳಿ ಪಡೆದಂತಾಗಿದೆ. ಇಸ್ಲಾಮೀಕರಣ ಗೊಂಡ ನಂತರ ಹಿಂದೂ ದೇವಾಲಯಗಳ ಕಳೆದುಕೊಂಡಿದ್ದೆವು. ಈಗ ಎಲ್ಲಾವೂ ಪಡೆದಿರುವ ಬಗ್ಗೆ ಪಕ್ಷದಿಂದ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದರು.

ವೀರಾಜಪೇಟೆ ಮಂಡಲ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಬಿಜೆಪಿ ಸಂಪನ್ಮೂಲ ವ್ಯಕ್ತಿ ಸತ್ಯಮೂರ್ತಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಯಮುನಾ ನಾಣಯ್ಯ, ಪ್ರಮುಖರಾದ ಸುಮಿ ಸುಬ್ಬಯ್ಯ, ಶಶಿ ಸುಬ್ರಮಣಿ, ಮೂಕೊಂಡ ಸುಬ್ರಮಣಿ ಉಪಸ್ಥಿತರಿದ್ದರು. ಭಾರತಾಂಬೆ ಭಾವಚಿತ್ರ ಹಾಗೂ ದೇಶಕ್ಕಾಗಿ ದುಡಿದ ಪಕ್ಷದ ಹಿರಿಯ ಚೇತನಗಳಿಗೆ ಗೌರವ ನೀಡಲಾಯಿತು.

- ಸುದ್ದಿಪುತ್ರ.