ಮಡಿಕೇರಿ, ಸೆ.28: ಮಡಿಕೇರಿ ನಗರ ದಸರಾ ಸಾಂಸ್ಕøತಿಕ ಸಮಿತಿ ವತಿಯಿಂದ ಅಕ್ಟೋಬರ್ 6 ರಂದು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ 5 ನೇ ವರ್ಷದ ಮಹಿಳಾ ದಸರಾ ಆಯೋಜಿತವಾಗಿದೆ.
ಅಂದು ಬೆಳಗ್ಗೆ 10 ಗಂಟೆಯಿಂದ ಜಿಲ್ಲೆಯ ಮಹಿಳೆಯರಿಗಾಗಿ ವೈವಿಧ್ಯಮಯ ಸ್ಪರ್ಧೆಗಳು ನಡೆಯಲಿವೆ.
ಜಿಲ್ಲಾಧಿಕಾರಿ ಸೂಚನೆಯಂತೆ ಮಹಿಳಾ ದಸರಾ ಆಯೋಜನೆಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಅರುಂಧತಿ ಅವರನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಲಾಗಿದೆ.
ಮೆಹಂದಿ ಹಾಕುವ ಸ್ಪರ್ಧೆ, ಮನೆ ಯಿಂದ ತಯಾರಿಸಿದ ವೈವಿಧ್ಯಮಯ ರೊಟ್ಟಿ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆ, ಮಹಿಳಾ ಸಂಘಗಳಿಗೆ, ಸ್ವಸಹಾಯ ಸಂಘಗಳೂ ಸೇರಿದಂತೆ ಜಿಲ್ಲೆಯ ಮಹಿಳಾ ಸಂಘಗಳಿಗೆ ವಿವಿಧ ಉತ್ಪನ್ನಗಳ ಪ್ರದರ್ಶನ ಹಾಗೂ ಸ್ಪರ್ಧೆ, ಬಾಂಬ್ ಇನ್ ದಿ ಸಿಟಿ, ಸಾಂಪ್ರದಾಯಿಕ ಉಡುಗೆಯಲ್ಲಿನ ಛದ್ಮವೇಷ ಸ್ಪರ್ಧೆ, ವಾಲಗತ್ತಾಟ್, ಲಗೋರಿ, ಚನ್ನಮಣೆ, ಹಗ್ಗಜಗ್ಗಾಟ, ಸೀರೆಗೆ ರೇಟ್ ನಿಗದಿ ಸ್ಪರ್ಧೆಗಳೂ ಸೇರಿದಂತೆ ಹಲವು ಸ್ಪರ್ಧೆಗಳು ನಿಗದಿಯಾಗಿದೆ.
ಮಡಿಕೇರಿಯ ಮಹಿಳಾ ದಸರಾದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ 7026360963, 8762303208 ಸಂಪರ್ಕಿಸಬಹುದು.