ಚೆಟ್ಟಳ್ಳಿ, ಸೆ. 28: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ನಿರ್ದೇಶನದಂತೆ ಸೆಕ್ಟರ್ ಮಟ್ಟದಲ್ಲಿ ನವ ಬದುಕಿಗೊಂದು ದಿಕ್ಸೂಚಿ ಎಂಬ ಶೀರ್ಷಿಕೆಯ ಉಲಾಝ್ ಹಾಗೂ ಕ್ಯೂ - ಟೀಂ ತರಬೇತಿ ಶಿಬಿರ ಮಾಲ್ದಾರೆ ನೂರುಲ್ ಇಮಾನ್ ಮದರಸದಲ್ಲಿ ನಡೆಯಿತು.
ಕ್ಯೂ - ಟೀಂ ತರಗತಿಯನ್ನು ಉಸ್ತಾದ್ ಹಸೈನಾರ್ ಮಹ್ಳರಿ ಹಾಗೂ ಉಲಾಝ್ ತರಗತಿಗೆ ಎಸ್ಸೆಸ್ಸೆಫ್ ವೀರಾಜಪೇಟೆ ಡಿವಿಶನ್ ಅಧ್ಯಕ್ಷ ಝುಬೈರ್ ಸಅದಿ ನೇತೃತ್ವ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸೆಕ್ಟರ್ ಅಧ್ಯಕ್ಷ ಅಶ್ಕರ್ ಝೈನಿ, ಕಾರ್ಯದರ್ಶಿ ಜಾಬಿರ್ ಮಟ್ಟಂ ಸೆಕ್ಟರ್ ಕ್ಯೂ - ಟೀಂ ಕನ್ವೀನರ್ ಸಾಬಿತ್ ಮಾಲ್ದಾರೆ, ಅಯ್ಯುಬ್ ಹುಂಡಿ, ನಿಝಾಮುದ್ದೀನ್ ಮಟ್ಟಂ, ಸಲಾಂ ಮಾಲ್ದಾರೆ ಹಾಗೂ ಸೆಕ್ಟರ್ ವ್ಯಾಪ್ತಿಯ ಶಾಖೆಗಳ ಪ್ರತಿನಿಧಿಗಳು ಹಾಜರಿದ್ದರು.