ಅಣ್ಣೀರ ಹರೀಶ್ ಮಾದಪ್ಪ

ಶ್ರೀಮಂಗಲ, ಸೆ. 28 : ಕಡಿಮೆ ಅವಧಿಯಲ್ಲಿ ಬಹಳ ಎತ್ತರಕ್ಕೆ ಬೆಳೆದಿದ್ದ ಕೊಡಗಿನ ಪ್ರಮುಖ ಕಾಫಿ-ಕಾಳುಮೆಣಸು ವ್ಯಾಪಾರೋದ್ಯಮಿ ಯುವಕ ಅಚ್ಚಿಯಂಡ ಸುಖದೇವ್ ಅವರ ಪುತ್ರ ಹುದಿಕೇರಿಯ ಎ.ಎಸ್. ಸುನೀಲ್ (43) ಅವರ ಸಾವು ಬಗ್ಗೆ ಆತ್ಮ ಹತ್ಯೆ ಅಥವಾ ಕೊಲೆ ಎಂದು ಹುಟ್ಟಿಕೊಂಡಿದ್ದ ಅನುಮಾನಕ್ಕೆ ಪೊಲೀಸರು ಸುನೀಲ್‍ರವರ ಕಚೇರಿಯ ಸಿ.ಸಿ.ಟಿ.ವಿ. ‘ಫೂಟೇಜ್’ ಪರಿಶೀಲನೆ ನಂತರ ಅನುಮಾನಕ್ಕೆ ತೆರೆ ಬಿದ್ದಿದೆ.

ಶುಕ್ರವಾರ ಸಂಜೆ 7.45ಕ್ಕೆ ತಮ್ಮ ರಿವಾಲ್ವಾರಿಗೆ ಸುನೀಲ್‍ರವರು ಬುಲೇಟ್ ತುಂಬಿಸುತ್ತಿರುವದು ಮತ್ತು ಸ್ವಲ್ಪ ಸಮಯದ ನಂತರದಲ್ಲೇ ಸ್ವತಃ ತಲೆಗೆ ಗುಂಡು ಹಾರಿಸಿಕೊಂಡಿರುವ ದೃಶ್ಯ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದೆ. ಸಿಸಿ ಟಿವಿಯ ಫೂಟೇಜನ್ನು ಕುಟ್ಟ ವೃತ್ತ ನಿರೀಕ್ಷಕ ಪರಶಿವ ಮೂರ್ತಿ ಮತ್ತು ಶ್ರೀಮಂಗಲ ಉಪನಿರೀಕ್ಷಕ (ಉಸ್ತುವಾರಿ) ಟಿ.ಎಂ. ಸಾಬು ಪರಿಶೀಲಿಸಿ ಅನುಮಾನಕ್ಕೆ ತೆರೆ ಎಳೆದರು.

ಉದ್ಯಮದಲ್ಲಿ ಉಂಟಾದ ನಷ್ಟ ಹಾಗೂ ಸಾಲದ ಹೊರೆ ಆತ್ಮ ಹತ್ಯೆಗೆÉ ಕಾರಣ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಯಶಸ್ವೀ ಉದ್ಯಮಿಯಾಗಿದ್ದ ಮತ್ತು ಕಡಿಮೆ ಅವಧಿಯಲ್ಲಿಯೇ ಕೊಡಗಿನಲ್ಲಿ ಆತ ಹೆಚ್ಚು ಕಾಫಿ ಮತ್ತು ಕಾಳುಮೆಣಸು ಖರೀದಿಸುತ್ತಿರುವ ವ್ಯಾಪಾರಿ ಎಂದು ಹೆಗ್ಗಳಿಕೆ ಪಡೆದಿದ್ದ ಅನಿರೀಕ್ಷಿತ ಆತ್ಮಹತ್ಯೆ ಜನವಲಯದಲ್ಲಿ ಅದರಲ್ಲೂ ಅವರೊಂದಿಗೆ ವ್ಯವಹಾರ ಇಟ್ಟುಕೊಂಡಿದ್ದ ಬೆಳೆಗಾರರಿಗೆ ತೀವ್ರ ಅಘಾತ ಉಂಟುಮಾಡಿದೆ.

ಸುನೀ¯ರವರು ಆತ್ಮಹತ್ಯೆ ಮಾಡಿಕೊಳ್ಳುವ ಒಂದು ತಾಸು ಮುನ್ನ ಹುದಿಕೇರಿಯ ತಮ್ಮ ಕಚೇರಿ ಸಮೀ¥ದ ತಮ್ಮ ಮನೆಗೆ ತೆರಳಿ ತಂದೆ-ತಾಯಿ, ಪತ್ನಿ, ಮಕ್ಕಳೊಂದಿಗೆ (ಓರ್ವ ಪುತ್ರ, ಓರ್ವ ಪುತ್ರಿ) ಮಾತನಾಡಿದ್ದಾರೆ. ಆದರೆ ತಮ್ಮ ಕುಟುಂಬದವರೊಂದಿಗಾಗಲೀ ಆಪ್ತ ಸ್ನೇಹಿತರಿಗಾಗಲೀ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರದ ಮನಸ್ಥಿತಿಯ ಬಗ್ಗೆ ಯಾವದೇ ಸುಳಿವು ನೀಡಿರಲಿಲ್ಲ.

ತಮ್ಮ ಕಚೇರಿಯ ಮೇಜಿನಲ್ಲಿ ಫೈಲ್ ಒಂದನ್ನು ಇರಿಸಿದ್ದು, ಅದರಲ್ಲಿ ತಮಗೆ ಬರಬೇಕಾದ ಮತ್ತು ತಾವು ಕೊಡಬೇಕಾದ ಹಣದ ವಿವರಗಳನ್ನು ಬರೆದಿಟ್ಟಿದ್ದು, ಈ ಪತ್ರದಲ್ಲಿ “ನಾನು ನಿಮ್ಮೊಂದಿಗೆ ಇರುವದಿಲ್ಲ ಕ್ಷಮಿಸಿ” ಎಂದು ಬರೆದಿರುವದು ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸಾಯುವ ಮುನ್ನ ತನ್ನ ಮಿಲ್ ಸಿಬ್ಬಂದಿ ಖಾದÀರ್‍ಗೆ ಪೋಸ್ಟ್ ಮಾಡಲು ಒಂದು ಕವರ್ ನೀಡಿದ್ದು, ಅದನ್ನು ಹುದಿಕೇರಿ ಅಂಚೆ ಕಚೇರಿಯ ಬಾಕ್ಸ್‍ನಲ್ಲಿ ಹಾಕುವಂತೆ ಹೇಳಿದ್ದಾರೆ. ಇದು ಯಾರಿಗೆ ಬರೆದ ಕವರ್ ಅಥವಾ ಇದರಲ್ಲೇನಿದೆ ಎಂಬದು ನಿಗೂಢವಾಗಿದೆ. ಇನ್ನೊಂದು ಮೂಲದ ಪ್ರಕಾರ Pಚೇರಿ ಸಮೀಪವೇ ಇದ್ದ, ಖಾದರ್‍ನನ್ನು ಅಲ್ಲಿಂದ ಸಾಗ ಹಾಕಲು ಕವರ್ ನೆಪದಲ್ಲಿ ಕಳುಹಿಸಿರಬಹುದೆಂದು ಹೇಳಲಾಗುತ್ತಿದೆ.