ಸುಂಟಿಕೊಪ್ಪ, ಸೆ. 27: ಸುಂಟಿಕೊಪ್ಪ ಪಂಚಾಯಿತಿ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಅಡ್ಡಾಡುತ್ತಿದ್ದ ಬೀದಿ ನಾಯಿಗಳನ್ನು ಹಿಡಿದು ವಾಹನದ ಮೂಲಕ ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು.
ಸುಂಟಿಕೊಪ್ಪ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಅಡ್ಡಾಡುತ್ತಿದ್ದ ಬೀದಿ ನಾಯಿಗಳು ವಾಹನ ಅಪಘಾತ ಕಾರಣವಾಗಿದ್ದು ಹಲವು ವಾಹನ ಚಾಲಕರ ಜೀವಕ್ಕೆ ಕಂಟಕವಾಗಿ ಪರಿಣಿಮಿಸಿದ್ದು, ಸಾರ್ವಜನಿಕರು ಪಂಚಾಯಿತಿಗೆ ದೂರು ನೀಡಿದ್ದರು. ಪಂಚಾಯಿತಿ ಆಡಳಿತದವರ ಆದೇಶದ ಮೇರೆಗೆ ಪೌರ ಕಾರ್ಮಿರು ಬೀದಿ ನಾಯಿಗಳನ್ನು ಹಿಡಿದು ಗೂಡ್ಸ್ ವಾಹನದಲ್ಲಿ ತುಂಬಿಸಿ ದೂರದ ನಾಗರಹೊಳೆ ಆಭಯಾರಣ್ಯದಲ್ಲಿ ಬಿಡಲಾಯಿತು.