ವೀರಾಜಪೇಟೆ, ಸೆ. 26: ಪೊನ್ನಂಪೇಟೆ ಕೂರ್ಗ್ ಸ್ಪೋರ್ಟ್ ಕ್ಲಬ್ ತಾ. 28 ರಂದು ಏರ್ಪಡಿಸಿದ್ದ ವಿಶೇಷÀ ಮಹಾ ಸಭೆಯನ್ನು ನಡೆಸದಂತೆ ಪೊನ್ನಂಪೇಟೆಯ ಎಂ.ಟಿ. ಮುತ್ತಣ್ಣ ಎಂಬವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ವೀರಾಜಪೇಟೆ ಜೆ.ಎಂ.ಎಫ್.ಸಿ ನ್ಯಾಯಾಧೀಶ ಡಿ.ಆರ್. ಜಯಪ್ರಕಾಶ್ ತಡೆಯಾಜ್ಞೆ ನೀಡಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ನಮ್ಮ ಮಕ್ಕಳಿಗೆ ಕ್ರೀಡಾಂಗಣದಲ್ಲಿ ಸ್ಕೇಟಿಂಗ್ ಕಲಿಸುತ್ತಿದ್ದಾಗ ಷಟಲ್ ಕೋರ್ಟ್ನ್ನು ಹಾಳು ಮಾಡಿದ್ದಾರೆ ಎಂಬ ಆರೋಪ ಹೊರಿಸಿ ಮುತ್ತಣ್ಣರಿಗೆ ಶೋಕಾಸ್ ನೋಟೀಸು ಮಾಡಲಾಗಿತ್ತು.
ಆ ನೋಟೀಸಿನ ವಿರುದ್ಧವಾಗಿ ಪೊನ್ನಂಪೇಟೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಪೊನ್ನಂಪೇಟೆ ನ್ಯಾಯಾಲಯ ಕ್ಲಬ್ನ ನಿಯಾಮಾವಳಿ ಮೀರಿ ಅಮಾನತು ಮಾಡಬಾರದೆಂದು ತಡೆಯಾಜ್ಞೆ ನೀಡಿತ್ತು. ಆ ತಡೆಯಾಜ್ಞೆಯನ್ನು ಉಲ್ಲಂಘಿಸಿ ಅಮಾನತುಗೊಳಿಸಿದೆ. ತಡೆಯಾಜ್ಞೆಯನ್ನು ಉಲ್ಲಂಘಿಸಿದ ಕಾರಣ ಪೊನ್ನಂಪೇಟೆ ನ್ಯಾಯಾಲದಲ್ಲಿ ಪ್ರಕರಣ ನಡೆಯುತ್ತಿದೆ. ಈ ಮಧ್ಯೆ ಕ್ಲಬಿನ ಆಡಳಿತ ಮಂಡಳಿ ಮುತ್ತಣ್ಣ ಅವರನ್ನು ವಜಾಗೊಳಿಸಲು ವಿಶೇಷÀ ಮಹಾಸಭೆಯನ್ನು ಕರೆದ ಹಿನ್ನೆಲೆಯಲ್ಲಿ ವೀರಾಜಪೇಟೆ ನ್ಯಾಯಾಲಯ ವಿಶೇಷ ಮಹಾಸಭೆ ನಡೆಸದಂತೆ ತಡೆಯಾಜ್ಞೆ ನೀಡಿದೆ. ಮುತ್ತಣ್ಣ ಪರ ಕೊಕ್ಕಂಡ ಅಪ್ಪಣ್ಣ ವಾದ ಮಂಡಿಸಿದ್ದರು.