ಕೂಡಿಗೆ, ಸೆ. 26: ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಕಳೆದ ವಾರ್ಷಿಕ ಸಭೆಯಲ್ಲಿ ಕೈಗೊಳ್ಳಲು ಚರ್ಚಿಸಲಾಗಿದ್ದ ಕಾರ್ಯ ಕ್ರಮವನ್ನು ಕಾರ್ಯಗತಗೊಳಿಸುವ ಬಗ್ಗೆ, ಸಂಘಕ್ಕೆ ಹೊಂದಿಕೊಂ ಡಂತಿರುವ ಕಲ್ಯಾಣ ಮಂಟಪದ ಅಭಿವೃದ್ಧಿ ವಿಚಾರ ಹಾಗೂ ಸಿಬ್ಬಂದಿಗಳ ನೇಮಕಾತಿಯ ಬಗ್ಗೆ ಸಭೆಯಲ್ಲಿ ಹಾಜರಿದ್ದ ರೈತ ಸದಸ್ಯರುಗಳು ಅಧ್ಯಕ್ಷರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ಕಳೆದ ಸಾಲಿನಲ್ಲಿ ತೀರ್ಮಾನಿಸ ಲಾಗಿದ್ದರೂ ಕಲ್ಯಾಣ ಮಂಟಪದ ಅಭಿವೃದ್ಧಿ ಮತ್ತು ದುರಸ್ತಿ ಕೆಲಸವನ್ನು ಕೈಗೊಳ್ಳದೆ ಇರುವುದರ ಬಗ್ಗೆ ಸಭೆಯಲ್ಲಿದ್ದ ಕಾಂತರಾಜು, ಮಹೇಶ್, ಸೋಮಣ್ಣ, ಕೆ.ಕೆ. ಕೃಷ್ಣ ಮೊದಲಾದವರು ಆಗ್ರಹಿಸಿದರು. ಸಂಘವು ಲಾಭದತ್ತ ಸಾಗುತ್ತಿರುವ ಹಿನ್ನೆಲೆ ರೈತಪರ ಚಟುವಟಿಕೆಗಳಿಗೆ ಕಾರ್ಯೋನ್ಮುಖರಾಗಬೇಕೆಂದು ರೈತರು ತಿಳಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಟಿ.ಪಿ. ಹಮೀದ್, ನಿರ್ದೇಶಕರುಗಳಾದ ಕೆ.ಕೆ. ಭೋಗಪ್ಪ, ತಮ್ಮಣ್ಣೇಗೌಡ, ಅರುಣ್ ಕುಮಾರ್, ಎಸ್.ಎನ್. ರಾಜಾರಾವ್, ಟಿ.ಕೆ. ವಿಶ್ವನಾಥ್, ಹೆಚ್.ಆರ್. ಪಾರ್ವತಮ್ಮ, ಲಕ್ಷ್ಮಿರಮಣರಾಜ್ ಅರಸ್, ಕೃಷ್ಣೆಗೌಡ, ಪಿ. ಬಸಪ್ಪ, ರಮೇಶ್, ಕೆ.ಕೆ. ಪವಿತ್ರ, ಕುಶಾಲನಗರ ವೃತ್ತ ಮೇಲ್ವಿಚಾರಕ ಹೆಚ್.ಪಿ. ಸುಮಂತ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಪಿ. ಮೀನಾ ಉಪಸ್ಥಿತರಿದ್ದರು.
ಈ ಸಂದರ್ಭ ಅತಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.