ಕುಶಾಲನಗರ, ಸೆ. 26: ಕುಶಾಲನಗರ ಶಾರದ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಎಸ್. ಶಾಂತ ಅವರಿಗೆ ಸಹಕಾರ ಸಂಘದ ಅತ್ಯುತ್ತಮ ಮಹಿಳಾ ನಾಯಕಿ ಪ್ರಶಸ್ತಿ ಲಭಿಸಿದೆ. ಗೋವಾದಲ್ಲಿ ನಡೆದ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕಿಂಗ್ ಸಮ್ಮಿಟ್‍ನಲ್ಲಿ ಫ್ರಂಟಿಯರ್ಸ್ ಇನ್ ಕೋ ಆಪರೇಟಿವ್ ಬ್ಯಾಂಕಿಂಗ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.