ಕೂಡಿಗೆ, ಸೆ. 26: ಕೊಡಗು ಜಿಲ್ಲೆ ಪದವಿಪೂರ್ವ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ಕೂಡಿಗೆ ಕ್ರೀಡಾ ಶಾಲೆ ಮತ್ತು ವಿವಿಧ ಕಾಲೇಜುಗಳಲ್ಲಿ ನಡೆದ ಸೋಮವಾರಪೇಟೆ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜು ಸತತ ನಾಲ್ಕನೇ ಬಾರಿಗೆ ಸಮಗ್ರ ಪ್ರಶಸ್ತಿ ಪಡೆದಿದೆ.
ಬಾಲಕ ಮತ್ತು ಬಾಲಕಿಯರ ವಿಭಾಗದ ಖೋ-ಖೋ ಮತ್ತು ಥ್ರೋಬಾಲ್ ಪಂದ್ಯಾಟಗಳಲ್ಲಿ ಪ್ರಥಮ ಸ್ಥಾನ ಗಳಿಸಿವೆ.
ಬಾಲಕರ ವಿಭಾಗದಲ್ಲಿ ಸುಪ್ರೀತ್ ಎತ್ತರ ಜಿಗಿತ ಪ್ರಥಮ, ಉದ್ದಜಿಗಿತ ಪ್ರಥಮ, ತ್ರಿಪಲ್ ಜಂಪ್ ದ್ವಿತೀಯ, ಜಾವಲಿನ್ ಎಸೆತದಲ್ಲಿ ಭುವನ್ ಪ್ರಥಮ, ಚಂದೂರಾವ್ 100 ಮೀ ದ್ವಿತೀಯ, ಉದ್ದ ಜಿಗಿತ ದ್ವಿತೀಯ, ಟ್ರಿಪಲ್ ಜಂಪ್ ದ್ವಿತೀಯ, 1500 ಮೀ. ನಲ್ಲಿ ಪ್ರವೀಣ್ ದ್ವಿತೀಯ, ಹ್ಯಾಮರ್ ಥ್ರೋ ಗೋವಿಂದರಾಜ್ ತೃತೀಯ 4x100 ಮೀ ರಿಲೆಯಲ್ಲಿ ಚಂದುರಾವ್, ಸಾಗರ್, ತಿಲಕ್, ಸುಪ್ರೀತ್ ಪ್ರಥಮ, 4x400 ಮೀ ರಿಲೆಯಲ್ಲಿ ರಮೇಶ್, ಪ್ರವೀಣ್, ರಾಘವೇಂದ್ರ, ಅರುಣ ದ್ವಿತೀಯ ಸ್ಥಾನಗಳಿಸಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಹರ್ಷಿತ 100 ಮೀ.ನಲ್ಲಿ ಪ್ರಥಮ, 400 ಮೀ. ದ್ವಿತೀಯ, ತ್ರಿಪಲ್ ಜಂಪ್ ಪ್ರಥಮ, ಅರ್ಪಿತ ಕೆ.ಪಿ 3000 ಮೀ ಓಟ ಪ್ರಥಮ, ಉದ್ದ ಜಿಗಿತ ಪ್ರಥಮ, ತ್ರಿಪಲ್ ಜಂಪ್ ದ್ವಿತೀಯ, ವೀಣಾ ಎತ್ತರ ಜಿಗಿತದಲ್ಲಿ ಪ್ರಥಮ, 3000 ಮೀ ದ್ವಿತೀಯ, ಜ್ಯೋತಿಕ ಉದ್ದ ಜಿಗಿತ ದ್ವಿತೀಯ, ಲಾವಣ್ಯ 800 ಮೀ ಓಟ ತೃತೀಯ ಸ್ಥಾನ ಹಾಗೂ ರಿಲೆಯಲ್ಲಿ 4x100 ಮೀ ಮತ್ತು 4x400 ಮೀ ನಲ್ಲಿ ಹರ್ಷಿತ, ಅರ್ಪಿತ, ಲಾವಣ್ಯ, ಅಕ್ಷತಾ ಪ್ರಥಮ ಸ್ಥಾನಗಳಿಸಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.