ನಾಪೆÇೀಕ್ಲು, ಸೆ. 26: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ, ಜ್ಯೋತಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ನಾಪೆÇೀಕ್ಲು ಶ್ರೀ ರಾಮಟ್ರಸ್ಟ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಪ್ರಶಸ್ತಿಗಳಿಸುವದರ ಮೂಲಕ ಸಾಧನೆ ಮಾಡಿದ್ದಾರೆ.

ಪ್ರೌಢಶಾಲಾ ವಿಭಾಗದ ಬಾಲಕಿಯರ ಟೇಬಲ್ ಟೆನ್ನಿಸ್‍ನಲ್ಲಿ ಪ್ರಥಮ, ಬಾಲಕರ ಟೇಬಲ್ ಟೆನ್ನಿಸ್ ದ್ವಿತೀಯ, ಬಾಲಕಿಯರ ಹಾಕಿಯಲ್ಲಿ ದ್ವಿತೀಯ, ಬಾಲಕರ ಶಟಲ್ ಬ್ಯಾಡ್‍ಮಿಂಟನ್‍ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ತಂಡದ ರಿತೇಶ್ ತಮ್ಮಯ್ಯ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬಾಲಕರ ಫುಟ್‍ಬಾಲ್‍ನಲ್ಲಿ ದ್ವಿತೀಯ, ಬಾಲಕಿಯರ ವಾಲಿಬಾಲ್ ದ್ವಿತೀಯ ಹಾಗೂ ಬಾಲಕರ ಶಟಲ್ ಬ್ಯಾಡ್‍ಮಿಂಟನ್‍ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡರೆ, 100 ಮೀ. ಓಟದಲ್ಲಿ 7ನೇ ತರಗತಿ ವಿದ್ಯಾರ್ಥಿ ಪರಮ್ ಪೂವಣ್ಣ ಜಿಲ್ಲಾ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.