ಮಡಿಕೇರಿ, ಸೆ. 25: ಮಡಿಕೇರಿಯ ನಗರದ ಬಾಲಭವನ ದಲ್ಲಿ ಮಡಿಕೇರಿ ತಾಲೂಕು ಮತ್ತು ನಗರದ ಜಿಲ್ಲಾಮಟ್ಟದ ಜನಜಾಗೃತಿ ಸಭೆಯನ್ನು ತಾ. 27 ರಂದು (ನಾಳೆ) ಬೆ. 11 ಗಂಟೆಗೆ ಕರೆಯಲಾಗಿದೆ.
ಜಮ್ಮುಕಾಶ್ಮೀರದ 370ನೇ ವಿಧಿಯ ಐತಿಹಾಸಿಕ ತಿದ್ದುಪಡಿಯ ವಿಚಾರವಾಗಿ ಸಭೆಯನ್ನು ಏರ್ಪಡಿಸಲಾಗಿದೆ. ಈ ಸಭೆಯ ಉದ್ಘಾಟನೆಯನ್ನು ಆರೋಗ್ಯ ಸಚಿವ ಶ್ರೀರಾಮುಲು ಅವರು ನೆರವೇರಿಸು ವರು. ಒಂದು ದೇಶ ಒಂದು ಸಂವಿಧಾನದ ವಿಚಾರದ ಮಹತ್ವವನ್ನು ಮಾಜಿ ವಿಧಾನ ಪರಿಷತ್‍ನ ಸದಸ್ಯರು, ಮಾಜಿ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಲಿರುವರು.
ಈ ಸಭೆಯಲ್ಲಿ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚುರಂಜನ್, ಲೋಕಸಭಾ ಸದಸ್ಯ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಹಾಗೂ ಎಲ್ಲಾ ಜನಪ್ರತಿನಿಧಿಗಳು ಮತ್ತು ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಅಧ್ಯಕ್ಷ ಎ. ತಳೂರು ಕಿಶೋರ್‍ಕುಮಾರ್ ಹಾಗೂ ನಗರ ಅಧ್ಯಕ್ಷ ಮಹೇಶ್ ಜೈನಿ, ಸಂಘಟನೆ ಪ್ರಮುಖ ಧನಂಜಯ್ ಅವರುಗಳು ತಿಳಿಸಿದ್ದಾರೆ.