ಸುಂಟಿಕೊಪ್ಪ, ಸೆ. 24: ಟಾಟಾ ಕಾಫಿ ಎಸ್ಟೇಟ್ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನಕ್ಕೆ ಪೂರಕವಾಗಿ ಸುಂಟಿಕೊಪ್ಪ ಪಟ್ಟಣದ ಮುಖ್ಯ ರಸ್ತೆ ಬದಿಯಲ್ಲಿ ಅಲ್ಲಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಚೀಲ ಪ್ಲಾಸ್ಟಿಕ್ ಬಾಟಲಿಗಳನ್ನು ಎಕ್ಕಿ ತೆಗೆದು ಜನರಲ್ಲಿ ಪಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡಲು ಶನಿವಾರ ಆರಿವು ಮೂಡಿಸಲಾಯಿತು. ಟಾಟಾ ಕಾಫಿ ತೋಟದ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಮಿಕರು ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತಲೆಗೆ ಹೆಲ್ಮೆಟ್ ಧರಿಸಿ, ಕೈಗ್ಲೌಸ್ ಹಾಕಿಕೊಂಡು ಪ್ಲಾಸ್ಟಿಕ್‍ಗಳನ್ನು ಎಕ್ಕಿ ತೆಗೆದು ಪರಿಸರ ಜಾಗೃತಿ ಬಗ್ಗೆ ಗ್ರಾಮದಲ್ಲಿ ಶುಚಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿಕೊಂಡರು.