*ಗೋಣಿಕೊಪ್ಪಲು, ಸೆ. 24: 41ನೇ ವರ್ಷದ ಗೋಣಿಕೊಪ್ಪಲು ದಸರಾ ಜನೋತ್ಸವದ ಅಂಗವಾಗಿ ಅ. 6 ರಂದು ಮಕ್ಕಳ ದಸರಾ ಕಾರ್ಯಕ್ರಮ ಮತ್ತು ಸ್ಪರ್ಧೆ ಇಲ್ಲಿನ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕೆ.ಜಿ ರಾಮಕೃಷ್ಣ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 10 ಗಂಟೆಗೆ ಮಕ್ಕಳ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವದು. ಮಕ್ಕಳ ಸಂತೆ, ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನ, ಗೋಣಿಚೀಲದ ಓಟ, ಸಾಮೂಹಿಕ ಜಾನಪದ ಗೀತೆ, ಚಿತ್ರ ಕಲೆ ವೈಯಕ್ತಿಕ ಸ್ಪರ್ಧೆ, ಪೌರಾಣಿಕ ಛದ್ಮವೇಷ ಸ್ಪರ್ಧೆ, ಜಾನಪದ ಸಾಮೂಹಿಕ ನೃತ್ಯ, ಭರತನಾಟ್ಯ ರೂಪಕ ನೃತ್ಯ ಸ್ಪರ್ಧೆಗಳು ನಡೆಯಲಿದೆ. 1 ರಿಂದ 10ನೇ ತರಗತಿಯವರೆಗೆ ಮೂರು ವಿಭಾಗಗಳಲ್ಲಿ ಈ ಸ್ಪರ್ಧೆಗಳು ನÀಡೆಯಲಿದೆ.

ಮುಂಚಿತವಾಗಿ ಹೆಸರು ನೋಂದಾಯಿಸಿಕೊಂಡವರು ಮಾತ್ರ ಭಾಗವಹಿಸಲು ಅವಕಾಶವಿದೆ. ಅಕ್ಟೋಬರ್ 3ರೊಳಗೆ ತಮ್ಮ ಹೆಸರನ್ನು ನೋಂದಾಯಿಸತಕ್ಕದ್ದು. ಅಲ್ಲದೇ ಗೋಣಿಚೀಲ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವವರು ಚೀಲವನ್ನು ತಾವೇ ತರಬೇಕು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8277132902, 7619270529 ಸಂಪರ್ಕಿಸಬಹುದಾಗಿದೆ.