ಗೋಣಿಕೊಪ್ಪ ವರದಿ, ಸೆ. 22: ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಆಶ್ರಯದಲ್ಲಿ ನಡೆಯಲಿರುವ 17 ಹಾಗೂ 19 ವಯೋಮಿತಿಯ ಹಾಕಿ ಟೂರ್ನಿಗೆ ಗೋಣಿಕೊಪ್ಪ ಕಾಲ್ಸ್ ಶಾಲೆಯ 9 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.

17 ವರ್ಷ ವಯೋಮಿತಿ ವಿಭಾಗದಲ್ಲಿ ದಿಶಾನ್ ಕಾರ್ಯಪ್ಪ, ಅಡ್ವಿನ್ ಜುಸ್ಟಾ, ಎಂ.ಡಿ. ನಿಯಾಮ್ ಹಾಗೂ ಕೆನ್ ಕುಟ್ಟಪ್ಪ, 19 ವಯೋಮಿತಿಯ ವಿಭಾಗದಲ್ಲಿ ಆಟಗಾರರಾದ ಭುವನ್ ಬೋಪಣ್ಣ, ಡಿ.ಕೆ. ಚಂಗಪ್ಪ, ಪ್ರತಿಕ್ ಕುಶಾಲಪ್ಪ, ತಶ್ವಿನ್ ಪೊನ್ನಣ್ಣ, ಕೆ.ಡಿ. ಕುಶಾಲಪ್ಪ ಅವರುಗಳು ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಒಡಿಶಾದ ರೋರ್ಕೆಲಾ ಎಸ್‍ಎಐಎಲ್ ಸ್ಟೇಡಿಯಂನಲ್ಲಿ ಸಿಐಎಸ್‍ಸಿ ಆಯೋಜಿಸಿದ್ದ ಸಿಐಎಸ್‍ಸಿ ರಾಷ್ಟ್ರಮಟ್ಟದ ಕಿರಿಯರ ಹಾಕಿ ಟೂರ್ನಿ ಯಲ್ಲಿ ನೀಡಿದ್ದ ಉತ್ತಮ ಪ್ರದರ್ಶನದಿಂದ ಎರಡು ವಿಭಾಗದಲ್ಲಿಯೂ ಜಯ ಗಳಿಸಿ ಆಯ್ಕೆಯಾಗಿದ್ದಾರೆ.