ಸೋಮವಾರಪೇಟೆ,ಸೆ.22: ಕಳೆದ ವರ್ಷದ ಮಹಾಮಳೆಯಲ್ಲಿ ಗುಡ್ಡ ಕುಸಿತಕ್ಕೆ ಒಳಗಾಗಿದ್ದ ಹಟ್ಟಿಹೊಳೆಯಲ್ಲಿ ಟಾಟಾ ಕಾಫಿ ಸಂಸ್ಥೆ ವತಿಯಿಂದ ವೆಟಿವೆರ್ ಹುಲ್ಲನ್ನು ನಾಟಿ ಮಾಡಲಾಯಿತು.

ಸಂಸ್ಥೆಯ ಕಾರ್ಮಿಕರು ಗುಡ್ಡ ಕುಸಿದಿದ್ದ ಸ್ಥಳದಲ್ಲಿ ಮಣ್ಣಿನ ಸವೆಕಳಿಯನ್ನು ತಡೆಯಲು ವೆಟಿವೆರ್ ಹುಲ್ಲುಗಳನ್ನು ನೆಟ್ಟರು. ಈ ಸಂದರ್ಭ ಹಿರಿಯ ವ್ಯವಸ್ಥಾಪಕ ಮುತ್ತಣ್ಣ, ಉಪ ವ್ಯವಸ್ಥಾಪಕ ದರ್ಶನ್, ಸಿಬ್ಬಂದಿಗಳಾದ ಸತೀಶ್‍ಕುಮಾರ್, ತಿಮ್ಮಯ್ಯ, ಅಪ್ಪಣ್ಣ, ಮಂಜು, ಕಸ್ತೂರಿ, ಮೀನಾ, ಮುದ್ದಪ್ಪ, ಅಮರ್‍ನಾಥ್, ಮಣಿ, ಸ್ಟಾಲಿನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.