ಪೆರಾಜೆ,ಸೆ.23: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪೆರಾಜೆ ಇದರ 2018-19ರ ನೂತನ ವರ್ಷದಲ್ಲೇ ವಿವಿಧ ವಹಿವಾಟುಗಳ ಮೂಲಕ ರೂ.9.59 ಲಕ್ಷ ಲಾಭಗಳಿಸಿರುವದಾಗಿ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ತಿಳಿಸಿದ್ದಾರೆ.
ಪೆರಾಜೆಯ ಶ್ರೀ ಅನ್ನಪೂರ್ಣೇ ಶ್ವರಿ ಕಲಾಮಂದಿರದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು. ಪಾರದರ್ಶಕ ಮತ್ತು ಸಕರಾತ್ಮಕ ಸಹಕಾರ ಮನೋಭಾವನೆಯ ಸೇವೆಯೇ ನಮ್ಮ ಮೊದಲ ಗುರಿ, ಸದಸ್ಯರು ಸ್ವಾವಲಂಬಿ ಗಳಾಗುವಲ್ಲಿ ಸಂಘದ ವತಿಯಿಂದ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿ ದ್ದೇವೆ, ಸದಸ್ಯರು ಸಾಲಮನ್ನಾ ಮೊತ್ತವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸಕಾಲದಲ್ಲಿ ಸಾಲ ಮರುಪಾವತಿಸಿ ಹೊಂದಿ ಕೊಳ್ಳುವ ಬಗ್ಗೆ ಹಾಗೂ ಕೃಷಿ ಉತ್ಪನ್ನ ಗಳನ್ನು ಸಂಘದ ಮುಖಾಂತರವೇ ಮಾರಾಟ ಮಾಡಿ ಸಂಘದ ವ್ಯವಹಾರಗಳನ್ನು ಹೆಚ್ಚಿಸುವದರ ಜೊತೆಗೆ ತಾವು ಆರ್ಥಿಕವಾಗಿ ಸದೃಡರಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾ.ಕೃ.ಪ.ಸ ಸಂಘದ ಉಪಾಧ್ಯಕ್ಷ ಮೋನಪ್ಪ ನಿಡ್ಯಮಲೆ, ನಿರ್ದೇಶಕರುಗಳಾದ ಅಶೋಕ್ ಪೆರುಮುಂಡ, ಗಾಂಧಿಪ್ರಸಾದ್ ಬಂಗಾರಕೋಡಿ, ದಿನರಾಜ ದೊಡ್ಡಡ್ಕ, ಪ್ರಸನ್ನ ನೆಕ್ಕಿಲ, ರೇಣುಕಾ. ಎಲ್ ಕುಂದಲ್ಪಾಡಿ , ಪ್ರಮೀಳ ಭಾರದ್ವಾಜ್, ಉದಯ ಆಚಾರ್, ದಾಸಪ್ಪ ಮಡಿವಾಳ, ಜಯರಾಮ, ಪಿ.ಟಿ. ಕಿರಣ್ ಬಂಗಾರಕೋಡಿ, ಶೇಷಪ್ಪ ಎನ್.ವಿ, ಜಿಲ್ಲಾ ಕೇಂದ್ರ ಬ್ಯಾಂಕಿನ ಶಾಖಾ ವ್ಯವಸ್ಥಾಪಕರು ಮತ್ತು ಮೇಲ್ವಿಚಾರಕರು, ಸಂಘದ ಸಿಬ್ಬಂದಿ, ಜನಪ್ರತಿನಿಧಿಗಳು, ಉಪಸ್ಥಿತರಿದ್ದರು.
ಸಭೆಯು ಯತಿಶ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭ ಗೊಂಡು, ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಣಾಧಿಕಾರಿ ಲೋಕೇಶ್ ಹೊದ್ದೆಟ್ಟಿ ಸ್ವಾಗತಿಸಿದರು. ಬ್ಯಾಂಕ್‍ನ ಸಿಬ್ಬಂದಿಗಳಾದ ಜಾನಕಿ ಎನ್.ಎಸ್, ಮತ್ತು ಗೋಪಾಲಕೃಷ್ಣ ಅಡ್ತಲೆ ಅವರ ನಿರೂಪಣೆ, ನಿರ್ದೇಶಕಿ ಪ್ರಮೀಳಾ ಭಾರದ್ವಾಜ್ ಬಂಗಾರಕೋಡಿ ಅವರು ವಂದಿಸಿದರು.
ವರದಿ: ಕಿರಣ್ ಕುಂಬಳಚೇರಿ