ವೀರಾಜಪೇಟೆ, ಸೆ. 23: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ವ್ಯಾಪ್ತಿಗೊಳಪಡುವ ಸುಂಕದಕಟ್ಟೆಯ ಡೆಂಟಲ್ ಕಾಲೇಜು ತಿರುವಿನಿಂದ ಮೀನುಪೇಟೆಯ ಸೇತುವೆಯವರೆಗೆ ರಸ್ತೆಯನ್ನು ವಿಸ್ತರಿಸುವ ಸಂಬಂಧ ಸಾರ್ವಜನಿಕರಿಂದ ಅಹವಾಲು ಹಾಗೂ ಸಲಹೆಗಳನ್ನು ಸ್ವೀಕರಿಸಲು ಸಾರ್ವಜನಿಕರು, ಆಸ್ತಿ ಮಾಲೀಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆಯನ್ನು ತಾ. 25 ರಂದು ಅಪರಾಹ್ನ ಇಲ್ಲಿನ ಸಂತ ಅನ್ನಮ್ಮ ಪ್ರೌಢ ಶಾಲೆಯ ದ್ವಿ ಶತಮಾನೋತ್ಸವ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಮುಖ್ಯಾಧಿಕಾರಿ ಶ್ರೀಧರ್ ತಿಳಿಸಿದ್ದಾರೆ.