ನಾಪೆÇೀಕ್ಲು, ಸೆ. 22: ಉತ್ತಮ ಆರೋಗ್ಯಕ್ಕೆ ಸಾವಯವ ತರಕಾರಿ ಸಹಕಾರಿಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಚೇತನ್ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವೀರಾಜಪೇಟೆ ಮತ್ತು ಮಡಿಕೇರಿ ವತಿಯಿಂದ ಭಾಗಮಂಡಲದಲ್ಲಿ ನಡೆದ ‘ತರಕಾರಿ ಕೃಷಿ ಮಾಹಿತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾವಯವ ಕೃಷಿ ಇಂದು ಪ್ರತಿಯೊಬ್ಬ ಕೃಷಿಕನ ಮೊದಲ ಆದ್ಯತೆ ಆಗಬೇಕು. ಮಾರಾಟಕ್ಕೆ ಸಾಧ್ಯವಾಗದಿದ್ದರೂ ತಮ್ಮ ದಿನನಿತ್ಯದ ಬಳಕೆಗಿರುವ ತರಕಾರಿಗಳನ್ನು ತಾವೇ ಬೆಳೆಸಿಕೊಳ್ಳುವದರ ಮೂಲಕ ಆರೋಗ್ಯವಂತ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಧರಣಿ ತಮ್ಮ ಹದಿನೇಳು ವರ್ಷದ ತರಕಾರಿ ಕೃಷಿಯ ಅನುಭವವನ್ನು ವಿವರಿಸಿದರು. ಕಾರ್ಯಕ್ರಮವನ್ನು ಸಹಾಯಕ ತೋಟಗಾರಿಕಾ ಅಧಿಕಾರಿ ವಸಂತ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಜಯಂತ್ ವಹಿಸಿದ್ದರು.

ವೇದಿಕೆಯಲ್ಲಿ ಸೇವಾ ಪ್ರತಿನಿಧಿಗಳಾದ ಅಮೆ ವೆಂಕಟರಮಣ, ಅಣ್ಣಯ್ಯ ಇದ್ದರು.