ವೀರಾಜಪೇಟೆ, ಸೆ. 21: ವೀರಾಜಪೇಟೆಯಲ್ಲಿರುವ ಕೊಡಗು ಮುಸ್ಲಿಂ ಸಹಕಾರ ಸಂಘ 2018-19ನೇ ಸಾಲಿನಲ್ಲಿ ಸುಮಾರು ರೂ 27ಕೋಟಿ ವ್ಯವಹಾರ ನಡೆಸಿದ್ದು, ಲಾಭದಲ್ಲಿ ಮುಂದುವರೆದಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಸಹಕಾರ ಸಂಘಗಳ ಮಹಾಮಂಡಳದ ನಿರ್ದೇಶಕರು, ಸಹಕಾರ ಸಂಘದ ಅಧ್ಯಕ್ಷ ಬಿ.ಆರ್. ಮಹಮ್ಮದ್ ಶುಹೇಬ್ ತಿಳಿಸಿದರು.

ವೀರಾಜಪೇಟೆಯ ಪುರಭವನದಲ್ಲಿ ಇಂದು ನಡೆದ ಕೊಡಗು ಮುಸ್ಲಿಂ ಸಹಕಾರ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಮಹಮ್ಮದ್ ಶುಹೇಬ್ ಅವರು ಸಂಘದಲ್ಲಿ ಇಲ್ಲಿಯ ತನಕ 4109 ಸದಸ್ಯರುಗಳಿದ್ದು ಸದಸ್ಯರುಗಳ ವಿವಿಧ ರೀತಿಯ ಠೇವಣಿಗಳು ರೂ 3ಕೋಟಿ 40ಲಕ್ಷಗಳಿದ್ದು, ಪಾಲು ಬಂಡವಾಳ ರೂ 40ಲಕ್ಷ ಇದೆ. ಸಂಘದ ಸದಸ್ಯರುಗಳಿಗೆ 3ಕೋಟಿ 50ಲಕ್ಷ ಸಾಲ ವಿತರಣೆ ಆಗಿದೆ. ಮಹಾಸಭೆಯಲ್ಲಿ ಸದಸ್ಯರುಗಳಿಗೆ ವಿತರಿಸುವ ಊಟದ ಭತ್ಯೆ ರೂ 300ರಲ್ಲಿ ರೂ 50ನ್ನು ಕೊಡಗಿನ ವಿಕೋಪ ಪರಿಹಾರ ನಿಧಿಗೆ ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಸಹಕಾರ ಸಂಘ ಇನ್ನಷ್ಟು ಏಳಿಗೆಯನ್ನು ಕಾಣಲು ಪರಸ್ಪರ ಸದಸ್ಯರುಗಳ ಸಹಕಾರ ಅಗತ್ಯ ಎಂದರು.

ಸಭೆಯಲ್ಲಿ ಸಂಘದ ನಿರ್ದೇಶಕ ಮನ್ಸೂರ್ ಆಲಿ ಅವರ ಪುತ್ರಿ, ಎಂ.ಎಂ. ಶಮಾ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡ 96 ಅಂಕಗಳನ್ನು ಗಳಿಸಿದ್ದು, ನಿರ್ದೇಶಕ ಕೆ.ಎ.ಅಬೂ ಸಾಲೆಹ ಅವರ ಪುತ್ರ ದ್ವಿತೀಯ ಪಿಯುಸಿಯಲ್ಲಿ ಶೇಕಡ 92 ಅಂಕ ಗಳಿಸಿದ್ದು, ನಿರ್ದೇಶಕ ಎಸ್.ಎಚ್. ಮೈನುದ್ದೀನ್ ಅವರ ಪುತ್ರಿ ಸುಹಾನ ಕುಲ್ಸುಂ ಟೂರಿಸಂ ಮ್ಯಾನೇಜ್‍ಮೆಂಟ್‍ನ ಪದವಿ ಪರೀಕ್ಷೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕ ಗಳಿಸಿದ್ದು, ಮೂವರನ್ನು ಸನ್ಮಾನಿಸಲಾಯಿತು. ಸಂಘದ ಹಿರಿಯ ಸದಸ್ಯ ಎಚ್. ಅಬ್ದುಲ್ ಸತ್ತಾರ್ ಅವರನ್ನು ಗೌರವಿಸಲಾಯಿತು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕನ್ನಡಿಯಂಡ ಎ. ಜುಬೇರ್, ನಿರ್ದೇಶಕ ಎಸ್.ಎಚ್. ಮೈನುದ್ದೀನ್, ಎಂ.ಎಸ್. ಮಹಮ್ಮದ್ ಶಫಿ, ಕೆ.ಎ. ಅಬೂ ಸಾಲೆಹ, ಎ.ಕೆ. ಜಬೀವುಲ್ಲಾ, ಎಂ.ಕೆ. ನಜೀಬ್, ಎಂ.ಎ. ಮನ್ಸೂರ್ ಆಲಿ, ಎಂ.ಎ. ಜಿಯಾವುಲ್ಲಾ, ಎಂ.ಎ. ಮಹಮ್ಮದ್ ಯೂಸೂಫ್, ಎಂ.ಪಿ. ಅಲ್ತಾಫ್, ಜೆ.ಎಸ್. ಸಮೀವುಲ್ಲಾ, ಮಹಿಳಾ ನಿರ್ದೇಶಕರುಗಳಾದ ಅಬೀದಾ ಬೇಗಂ, ತಸ್ನೀಂ ಅಕ್ತರ್ ಹಾಗೂ ಸಂಘದ ವ್ಯವಸ್ಥಾಪಕ ಕೆ.ಐ. ಮುಕ್ತಾರ್ ಹಾಜರಿದ್ದರು.