ಗೋಣಿಕೊಪ್ಪಲು: ರೋಟರಿ ಕ್ಲಬ್ ಗೋಣಿಕೊಪ್ಪ ವಲಯದ ವತಿಯಿಂದ ಸಾಯಿ ಶಂಕರ್ ವಿದ್ಯಾಸಂಸ್ಥೆಯಲ್ಲಿ ರೋಟರಿ ಇಂಟರ್ಯಾಕ್ಟ್ ಕ್ಲಬ್‍ನ ಪದಗ್ರಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭ ರೋಟರಿ ಇಂಟರ್ಯಾಕ್ಟ್ ಕ್ಲಬ್‍ನ ಅಧ್ಯಕ್ಷರಾಗಿ ಶೈನಿ ಮುತ್ತಮ್ಮ ಹಾಗೂ ಕಾರ್ಯದರ್ಶಿಯಾಗಿ ಸೋನು ಅವರನ್ನು ಆಯ್ಕೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜೋನಲ್ ಲೆಫ್ಟಿನೆಂಟ್ ಎಸ್.ಎ. ನರಸಿಂಹ ಅವರು ವಿದ್ಯಾರ್ಥಿಗಳಿಗೆ ನಾಯಕತ್ವ ಹಾಗೂ ಅದರ ಜವಾಬ್ದಾರಿಗಳನ್ನು ನಿರ್ವಹಿಸುವ ಬಗ್ಗೆ ತಿಳಿಸಿಕೊಟ್ಟರು. ಇವರೊಂದಿಗೆ ರೋಟರಿ ಕ್ಲಬ್ ಅಧ್ಯಕ್ಷರಾದ ಕೆ.ಬಿ. ನೆವೀನ್, ಕಾರ್ಯದರ್ಶಿ ಟಿ.ಬಿ. ಪೂಣಚ್ಚ ಹಾಗೂ ಸಾಯಿಶಂಕರ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯರು, ರೋಟರಿ ಕ್ಲಬ್ ಸದಸ್ಯರು, ಸಾಯಿಶಂಕರ ವಿದ್ಯಾಸಂಸ್ಥೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.ವೀರಾಜಪೇಟೆ: ಪಟ್ಟಣದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಮೈದಾನದಲ್ಲಿ ನಡೆಯುತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಶಾಲಾ ತಂಡಗಳು ಜಯಗಳಿಸಿ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡವು.
ಬಾಲಕರ ವಿಭಾಗ : ಕಬಡ್ಡಿಯಲ್ಲಿ ಸಿದ್ದಾಪುರದ ಶ್ರೀಕೃಷ್ಣ ವಿದ್ಯಾಮಂದಿರ ತಂಡ ಪ್ರಥಮ, ಸೋಮವಾರಪೇಟೆಯ ಮೂಕಾಂಬಿಕ ಪ್ರೌಢಶಾಲಾ ತಂಡವು ದ್ವಿತೀಯ, ಥ್ರೋಬಾಲ್‍ನಲ್ಲಿ ಶಿರಂಗಾಲದ ಸರ್ಕಾರಿ ಪ್ರೌಢಶಾಲೆ ಪ್ರಥಮ, ಕುಟ್ಟ ಸರ್ಕಾರಿ ಪ್ರೌಢಶಾಲೆಯ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಹ್ಯಾಂಡ್‍ಬಾಲ್‍ನಲ್ಲಿ ಕಳತ್ಮಾಡುವಿನ ಲಯನ್ಸ್ ಶಾಲೆ ಪ್ರಥಮ, ಹಾನಗಲ್‍ನ ಓಎಲ್‍ವಿ ಪ್ರೌಢಶಾಲೆಯ ತಂಡ ದ್ವಿತೀಯ ಸ್ಥಾನ ಗಳಿಸಿತು.
ಬಾಲಕಿಯರ ವಿಭಾಗ : ಕಬಡ್ಡಿಯಲ್ಲಿ ಶಿರಂಗಾಲದ ಸರ್ಕಾರಿ ಪ್ರೌಢಶಾಲೆಯ ತಂಡ ಪ್ರಥಮ, ಟಿ.ಶೆಟ್ಟಿಗೇರಿಯ ರೂಟ್ಸ್ ಪ್ರೌಢಶಾಲೆ ದ್ವಿತೀಯ, ಥ್ರೋಬಾಲ್‍ನಲ್ಲಿ ಬಿಳುಗುಂದದ ಸರ್ಕಾರಿ ಪ್ರೌಢಶಾಲೆ ಪ್ರಥಮ, ನಂಜರಾಯಪಟ್ಟಣ ಪ್ರೌಢಶಾಲೆಯ ತಂಡ ದ್ವಿತೀಯ, ಬಾಸ್ಕೆಟ್‍ಬಾಲ್‍ನಲ್ಲಿ ಕಳತ್ಮಾಡುವಿನ ಲಯನ್ಸ್ ಶಾಲೆ ಪ್ರಥಮ ಹಾಗೂ ಸುಂಟಿಕೊಪ್ಪದ ಸಂತ ಮೇರಿಸ್ ತಂಡ ದ್ವಿತೀಯ ಸ್ಥಾನ ಗಳಿಸಿತು. ಹ್ಯಾಂಡ್‍ಬಾಲ್‍ನಲ್ಲಿ ಕಳತ್ಮಾಡುವಿನ ಲಯನ್ಸ್ ಪ್ರಥಮ, ವೀರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆ ದ್ವಿತೀಯ ಸ್ಥಾನ ಗಳಿಸಿತು.
ಪ್ರಾಥಮಿಕ ವಿಭಾಗ : ಥ್ರೋಬಾಲ್‍ನಲ್ಲಿ ಅರವತೋಕ್ಲುವಿನ ಸರ್ವದೈವತಾ ತಂಡ ಪ್ರಥಮ, ಕುಶಾಲನಗರ ಫಾತಿಮಾ ಪ್ರಾಥಮಿಕ ಶಾಲೆ ದ್ವಿತೀಯ, ಕೊಕ್ಕೊನಲ್ಲಿ ಆಲೂರು ಸಿದ್ದಾಪುರದ ಎಂ.ಡಿ.ಆರ್ ಶಾಲೆ ಪ್ರಥಮ, ಹೆಗ್ಗಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದ್ವಿತೀಯ ಸ್ಥಾನ ಗಳಿಸಿತು. ಹ್ಯಾಂಡ್‍ಬಾಲ್‍ನಲ್ಲಿ ಮೂರ್ನಾಡಿನ ಮಾರುತಿ ಪ್ರಾಥಮಿಕ ಶಾಲೆ ಪ್ರಥಮ, ಕಳತ್ಮಾಡುವಿನ ಲಯನ್ಸ್ ಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಥ್ರೋಬಾಲ್‍ನಲ್ಲಿ ಅರವತೊಕ್ಲುವಿನ ಸರ್ವದೈವತಾ ಶಾಲೆ ಪ್ರಥಮ, ಕೂಡಿಗೆಯ ಆಂಜೆಲಾ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ, ಕೊಕ್ಕೋನಲ್ಲಿ ಆಲೂರು ಸಿದ್ದಾಪುರದ ಎಂ.ಡಿ.ಆರ್ ಶಾಲೆಯ ತಂಡ ಪ್ರಥಮ, ಚೆಟ್ಟಿಮಾನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡಿತು. ಹ್ಯಾಂಡ್‍ಬಾಲ್‍ನಲ್ಲಿ ವೀರಾಜಪೇಟೆಯ ಸಂತ ಅನ್ನಮ್ಮ ಪ್ರಾಥಮಿಕ ಶಾಲೆಯು ಪ್ರಥಮ ಸ್ಥಾನ ಗಳಿಸಿದರೆ, ಕೂಡಿಗೆಯ ಮೊರಾರ್ಜಿ ವಸತಿ ಶಾಲೆಯ ತಂಡವು ದ್ವಿತೀಯ ಸ್ಥಾನ ಗಳಿಸಿತು.ಸೋಮವಾರಪೇಟೆ: ಇಲ್ಲಿಗೆ ಸಮೀಪದ ಕಿರಗಂದೂರು ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ಕಾಜೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಪ್ರತಿಭೋತ್ಸವ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸ್ಪರ್ಧಾ ಕಾರ್ಯಕ್ರಮದಲ್ಲಿ ಬಹುಮಾನ ಪಡೆಯುವದಕ್ಕಿಂತಲೂ ಪಾಲ್ಗೊಳ್ಳುವದು ಮುಖ್ಯ. ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸಲು ಇಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು. ನಿರಂತರ ಪ್ರಯತ್ನದಿಂದ ಯಶಸ್ಸುಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‍ಡಿಎಂಸಿ ಅಧ್ಯಕ್ಷ ಪ್ರಸನ್ನ ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಬಿ.ಬಿ. ಸತೀಶ್, ಬಿಆರ್‍ಪಿ ವಿಜಯಕುಮಾರ್, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ. ಸೋಮಶೇಖರ್, ಸಿಆರ್‍ಪಿಗಳಾದ ಅಶೋಕ್, ಕಾಜೂರು ಸತೀಶ್ ಉಪಸ್ಥಿತರಿದ್ದರು.
ಇದೇ ಸಂದರ್ಭ ಕ್ಲಸ್ಟರ್‍ನಿಂದ ವರ್ಗಾವಣೆಗೊಂಡ ಹಾಗೂ ಬಡ್ತಿ ಹೊಂದಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಭಾವಗೀತೆ, ಜನಪದ ಗೀತೆ, ರಂಗೋಲಿ, ನೃತ್ಯ ಸ್ಪರ್ಧೆ, ನಾಟಕ, ಕಂಠಪಾಟ ಸೇರಿದಂತೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆದವು.ಮಡಿಕೇರಿ: ಮೇಕೇರಿ, ಬಿಳಿಗೇರಿ ಶಾಲೆಗೆ ತಾಲೂಕು ಪಂಚಾಯಿತಿ ಸ್ಕೀಂಮ್‍ನಲ್ಲಿ ಹಣ್ಣಿನ ಗಿಡಗಳನ್ನು ತಾ.ಪಂ. ಸದಸ್ಯರಾದ ಕುಮುದಾ ರಶ್ಮಿ ವಿತರಿಸಿದರು. ಬಿಳಿಗೇರಿ, ಮೇಕೇರಿ ಶಾಲೆಯ ಶಿಕ್ಷಕರು, ಮುಖ್ಯೋಪಾಧ್ಯಾಯರು, ತೋಟಗಾರಿಕೆ ಅಧಿಕಾರಿ ಗಣೇಶ್, ಹರೀಶ್ ಹಾಜರಿದ್ದರು.