ಸೋಮವಾರಪೇಟೆ, ಸೆ. 21: ಇಲ್ಲಿನ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷೆ ಗಾಯಿತ್ರಿ ನಾಗರಾಜ್ ಅಧ್ಯಕ್ಷತೆಯಲ್ಲಿ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆಯಿತು.
ಬ್ಯಾಂಕ್ ಆರ್ಥಿಕವಾಗಿ ಸದೃಢಗೊಳ್ಳುತ್ತಿದ್ದು, ಸದಸ್ಯರಿಗೆ ಉತ್ತಮ ಸೇವೆ ಒದಗಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನಿಂದ ನೀಡಲಾಗುವ ಉತ್ತಮ ಸಹಕಾರ ಸಂಘ-ವಾರ್ಷಿಕ ಪ್ರಶಸ್ತಿ ಲಭಿಸಿದೆ ಎಂದು ತಿಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಉಷಾ ತೇಜಸ್ವಿ, ಗೌರವ ಕಾರ್ಯದರ್ಶಿ ಜಲಜಾ ಶೇಖರ್, ನಿರ್ದೇಶಕರುಗಳಾದ ನಳಿನಿ ಗಣೇಶ್, ಸುಮಾ ಸುದೀಪ್, ಲೀಲಾ ನಿರ್ವಾಣಿ, ಶೋಭ ಶಿವರಾಜ್, ವಿಜಯಲಕ್ಷ್ಮೀ ಸುರೇಶ್, ಶೋಭ ಯಶವಂತ್, ಲತಾ ಮಂಜು ಉಪಸ್ಥಿತರಿದ್ದರು.