ಗೋಣಿಕೊಪ್ಪಲು, ಸೆ. 21: ಬ್ಯಾಂಕಿನ ಲೆಕ್ಕಾಚಾರಗಳ ಬಗ್ಗೆ ಮುದ್ರಿತವಾಗಿರುವ ಮಹಾ ಸಭೆಯ ಪುಸ್ತಕದಲ್ಲಿ ಸಣ್ಣ ಪುಟ್ಟ ತಪ್ಪುಗಳು ಮುಂದಿನ ಸಾಲಿನಲ್ಲಿ ಮರುಕಳಿಸದಂತೆ ಎಚ್ಚರವಹಿಸಲು ಹಿರಿಯ ಸದಸ್ಯರಾದ ಚೆಪ್ಪುಡೀರ ಸೋಮಯ್ಯ ಅಭಿಪ್ರಾಯಿಸಿದರು. ಗೋಣಿಕೊಪ್ಪಲಿನ ಉಮಾಮಹೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಗೋಣಿಕೊಪ್ಪ ಮರ್ಚೆಂಟ್ ಕ್ರೇಡಿಟ್ ಕೋ ಆಪರೇಟಿವ್ ಸೊಸೈಟಿಯ 20ನೇ ವರ್ಷದ ಮಹಾಸಭೆಯಲ್ಲಿ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹೇಳಿದರು.
ಬ್ಯಾಂಕ್ ಆರ್ಥಿಕವಾಗಿ ಪ್ರಗತಿಯತ್ತ ಸಾಗುತ್ತಿರುವ ಬಗ್ಗೆ ಸದಸ್ಯರು ಆಡಳಿತ ಮಂಡಳಿಯ ಕೆಲಸದ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ ಸದಸ್ಯರ ಮಾತಿಗೆ ಉತ್ತರಿಸುತ್ತ ಈಗಾಗಲೇ ಬ್ಯಾಂಕಿನ ಅಭಿವೃದ್ಧಿಗೆ ಶ್ರಮ ವಹಿಸಿದ್ದೇವೆ. ದಿನ ನಿತ್ಯ ಪಿಗ್ಮಿ ಸಂಗ್ರಾಹಕರು ಬ್ಯಾಂಕಿನ ಏಳಿಗೆಗೆ ದುಡಿಯುತ್ತಿರುವದು ಬ್ಯಾಂಕಿನ ಅಭಿವೃದ್ಧಿಗೆ ಮೂಲ ಕಾರಣ. ಪ್ರಸ್ತುತ ಬ್ಯಾಂಕ್ ಲಾಭದಲ್ಲಿದೆ. ಬ್ಯಾಂಕ್‍ನ ಆದಾಯ ಪಿಗ್ಮಿ ಸಂಗ್ರಹಕರ ಪರಿಶ್ರಮವೇ ಇದಕ್ಕೆ ಮೂಲ ಕಾರಣ. ಬ್ಯಾಂಕ್ ವರ್ತಕರಿಂದ ಪಿಗ್ಮಿಯನ್ನು ನಂಬಿಕೊಡು ಕೆಲಸ ಮಾಡುತ್ತಿದೆ.
ಕಳೆದ 19 ವರ್ಷಗಳಿಂದ ಪ್ರಗತಿ ಪಥದಲ್ಲಿ ಸಾಗುತ್ತಿರುವ ಗೋಣಿಕೊ ಪ್ಪಲುವಿನ ಮರ್ಚೆಂಟ್ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿಯು 780 ಸದಸ್ಯರನ್ನು ಒಳಗೊಂಡಿದ್ದು ಕೇವಲ ಪಿಗ್ಮಿ ಬಂಡವಾಳದಿಂದಲೇ ಬ್ಯಾಂಕ್ ಅಭಿವೃದ್ಧಿಯತ್ತ ಸಾಗುತ್ತಿದೆ. ಸದಸ್ಯರ ಸಹಕಾರದಿಂದ ಬ್ಯಾಂಕ್ 56,35,301 ಲಕ್ಷ ಲಾಭದಲ್ಲಿದ್ದು, 43,16,835 ಲಕ್ಷ ಪಾಲು ಬಂಡವಾಳವಿದೆ, 1,47,84,355 ನಿರಕು ಠೇವಣಿ ಇಡಲಾಗಿದ್ದು, ಬ್ಯಾಂಕಿನ ಕಟ್ಟಡ ಬಾಡಿಗೆ ಸಂಗ್ರಹ 15,41,000 ನಿರಕು ಠೇವಣಿ ನೀಡಲಾಗಿದೆ. ಯಾವದೇ ಬ್ಯಾಂಕಿನಿಂದ ಆರ್ಥಿಕ ಸಹಾಯ ಪಡೆಯದೆ ಬ್ಯಾಂಕ್‍ನಲ್ಲಿರುವ ಹಣದಿಂದಲೇ ಜಾಮೀನು, ಪಿಗ್ಮಿ, ನಗದು, ಓಡಿ, ಗಿರವಿ, ಆಭರಣ ಸಾಲಗಳನ್ನು ನೀಡಲಾಗುತ್ತಿದೆ. 13,16,41,854 ಸಾಲ ನೀಡಲಾಗಿದೆ ಎಂದು ಹೇಳಿದರು.
ಶೇ. 81 ಸಾಲ ವಸೂಲಾತಿ ಯಾಗಿದ್ದು, ಮುಂದಿನ ಸಾಲಿನಲ್ಲಿ ಶೇ.100 ಸಾಲ ವಸೂಲಾತಿ ಮಾಡುವ ಭರವಸೆ ವ್ಯಕ್ತ ಪಡಿಸಿದ ಅವರು ಕಳೆದ ಸಾಲಿನಲ್ಲಿ 9,90,63,883 ಸಾಲ ವಾಪಸ್ಸು ಪಡೆಯಲಾಗಿದೆ. ಗರಿಷ್ಠ ಪ್ರಮಾಣದಲ್ಲಿ ಡಿವಿಡೆಂಡ್ ನೀಡಲಾಗುತ್ತಿದೆ. ಬ್ಯಾಂಕಿನ ಸದಸ್ಯರು ತಮ್ಮ ಗೌರವ ಧನವನ್ನು ಸ್ವೀಕರಿಸದೆ ಈ ಹಣವನ್ನು ಪ್ರತ್ಯೇಕ ಖಾತೆಯಲ್ಲಿ ಜಮಾ ಮಾಡುವ ಮೂಲಕ ವಾರ್ಷಿಕವಾಗಿ ಈ ಹಣವನ್ನು ಕಾಲೇಜುಗಳಲ್ಲಿ ಫೀಸ್ ಕಟ್ಟಲು ತೊಂದರೆಯಲ್ಲಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಈ ಹಣವನ್ನು ನೀಡಲಾಗುತ್ತಿದೆ ಎಂದು ಅರುಣ್ ಪೂಣಚ್ಚ ತಿಳಿಸಿದರು.
ಸಭೆಯಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದು ತೇರ್ಗಡೆಯಾದ ಸದಸ್ಯರ ಮಕ್ಕಳಿಗೆ ಬಹುಮಾನ ನೀಡಲಾಯಿತು. ಸಭೆಯಲ್ಲಿ ಸದಸ್ಯರಾದ ಗಣೇಶ್ ರೈ, ಕಾಡ್ಯಮಾಡ ಗಿರೀಶ್ ಗಣಪತಿ, ಮದೋಶ್ ಪೂವಯ್ಯ ಮುಂತಾದವರು ಅಭಿಪ್ರಾಯ ಮಂಡಿಸಿದರು.
ಬ್ಯಾಂಕಿನಲ್ಲಿ ಹೆಚ್ಚಿನ ಪಿಗ್ಮಿ ಸಂಗ್ರಹಣ ಮಾಡಿದ ಗೋಣಿಕೊಪ್ಪಲಿನ ಪಿಗ್ಮಿದಾರರಾದ ಅಜಯ್‍ಕುಮಾರ್, ಸ್ವಾಮಿ, ಆಂಟೋನಿ, ವೀರಾಜ ಪೇಟೆಯ ಲವ, ಶ್ರೀಮಂಗಲದ ರಂಜನ್ ಅವರಿಗೆ ಬಹುಮಾನ ನೀಡಲಾಯಿತು. ಹೆಚ್ಚಿನ ಸಂಖ್ಯೆಯ ಸದಸ್ಯರು ಪಾಲ್ಗೊಂಡು ಮಹಾಸಭೆ ಯಶಸ್ವಿಗೊಳಿಸಿದರು. ನಿರ್ದೇಶಕಿ ಚೇದಂಡ ಸುಮಿ ಸುಬ್ಬಯ್ಯ ಪ್ರಾರ್ಥಿಸಿದರು. ಪ್ರಭಾರ ಕಾರ್ಯನಿರ್ವಾಹಣಾಧಿಕಾರಿ ಕಿರಣ್ ಬಿ.ಇ. ಸ್ವಾಗತಿಸಿದರು. ಉಪಾಧ್ಯಕ್ಷ ಕಡೇಮಾಡ ಸುನಿಲ್ ಮಾದಪ್ಪ ವಂದಿಸಿದರು. ವೇದಿಕೆಯಲ್ಲಿ ನಿದರ್ೇೀಶಕರಾದ ಕೆ.ಆರ್. ಬಾಲಕೃಷ್ಣ ರೈ, ಬಿ.ಎನ್. ಪ್ರಕಾಶ್, ಎನ್.ಕೆ. ದೇವಯ್ಯ ದ್ಯಾನ್ ಸುಬ್ಬಯ್ಯ, ಪಿ.ಎಸ್. ಸುರೇಶ್, ಎ.ಜೆ. ಬಾಬು, ಎ.ಕೆ. ಉಮ್ಮರ್ ಹೆಚ್.ಎನ್. ಮುರುಗನ್, ಕೆ.ಕೆ. ರೀನಾ ರಾಜೀವ್ ಹಾಜರಿದ್ದರು.
-ಹೆಚ್.ಕೆ. ಜಗದೀಶ್