ಶನಿವಾರಸಂತೆ, ಸೆ. 21: ಬಗರ್ ಹುಕುಂ ಸಾಗುವಳಿದಾರರು ಹಾಗೂ ಅರಣ್ಯ ಹಕ್ಕು ಸಾಗುವಳಿದಾರರಿಗೆ ಭೂಮಿಯ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ, ಕರ್ನಾಟಕ ಭೂಹಕ್ಕುದಾರರ ವೇದಿಕೆ ವತಿಯಿಂದ ಶನಿವಾರಸಂತೆ ಜಾತ್ರಾ ಬಾಣೆಯಿಂದ ಶನಿವಾರಸಂತೆ ಪಟ್ಟಣದ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ನಾಡಕಚೇರಿಯ ಉಪತಹಶೀಲ್ದಾರ್ ಎನ್. ನಂದಕುಮಾರ್ ಅವರಿಗೆ ಮನವಿ ನೀಡಲಾಯಿತು.
ಕೊಡಗು ಜಿಲ್ಲಾ ಸಂಚಾಲಕ ಸುನಂದಕುಮಾರ್, ಮಹಿಳಾ ಸಂಘದ ಕಾರ್ಯಕರ್ತೆ ವಿಮಲಾಕ್ಷಿ ಹಾಗೂ ಜಿಲ್ಲಾಧ್ಯಕ್ಷ ಎಸ್.ಕೆ. ಪುಟ್ಟಸ್ವಾಮಿ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮೆರವಣಿಗೆಯಲ್ಲಿ ಪ್ರಮುಖರಾದ ಒಡೆಯನಪುರದ ಪೊನ್ನಪ್ಪ, ಹಾರೇಹೊಸೂರು ಲೋಕೇಶ್, ನಿರ್ವಾಣಶೆಟ್ಟಿ, ಶಂಕರಶೆಟ್ಟಿ, ಮಹಿಮುನ, ಶೋಭಾ ಇತರರು ಭಾಗವಹಿಸಿದ್ದರು.