ಬಿರುನಾಣಿ, ಸೆ. 21: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಮರೆನಾಡು ಕೊಡವ ಸಮಾಜದ ವತಿಯಿಂದ ತಾ. 25 ರಂದು ಕೈಲ್ಪೊಳ್ದ್ ಸಂತೋಷಕೂಟ ಕಾರ್ಯಕ್ರಮ ಏರ್ಪಡಿಸಲಾಗಿದೆ. ತಾ. 25 ರಂದು ಬೆಳಿಗ್ಗೆ 10 ರಿಂದ ಮರೆನಾಡು ಕೊಡವ ಸಮಾಜದ ಅಧ್ಯಕ್ಷ ಮಲ್ಲೇಂಗಡ ಪೆಮ್ಮಯ್ಯ (ಪೊನ್ನುಮಣಿ) ಅವರ ಅಧ್ಯಕ್ಷತೆಯಲ್ಲಿ ಬಿರುನಾಣಿ ಮಹಿಳಾ ಸಮಾಜದಲ್ಲಿ ಈ ವರ್ಷದ ಕಾರ್ಯಕ್ರಮ ಜರುಗಲಿದೆ.
ಮರೆನಾಡು ಕೊಡವ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದು, ಮುಂದಿನ ವರ್ಷದಿಂದ ನೂತನ ಕಟ್ಟಡದಲ್ಲಿ ಕಾರ್ಯಕ್ರಮ ಜರುಗಲಿದ್ದು, ಜನತೆ ಸಹಕರಿಸುವಂತೆ ಆಡಳಿತ ಮಂಡಳಿಯವರು ಕೋರಿದ್ದಾರೆ.