ವೀರಾಜಪೇಟೆ, ಸೆ. 21: ಪರಬ್ರಹ್ಮ ದೇವನ ಪರಿಕಲ್ಪನೆಯಿಂದ ಸೃಷ್ಟಿಗೊಂಡ ವಿಶ್ವಕರ್ಮ ಜಯಂತೋತ್ಸವನ್ನು ವೀರಾಜಪೇಟೆ ತಾಲೂಕು ವಿಶ್ವಕರ್ಮ ಸಂಘದಿಂದ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ವೀರಾಜಪೇಟೆ ತಾಲೂಕಿನ ವಿಶ್ವಕರ್ಮ ಸಂಘದಿಂದ ನಗರದ ಮಲಬಾರ್ ರಸ್ತೆಯಲ್ಲಿರುವ ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಾಲಯದ ಸಭಾಂಗಣದಲ್ಲಿ ಜನಾಂಗ ಬಾಂದವರಿಂದ ವಿಶ್ವಕರ್ಮ ದೇವನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ 18ನೇ ವರ್ಷದ ಜಯಂತೋತ್ಸವ ಆಚರಿಸಲಾಯಿತು. ಮಂಗಳಕಾರನಾದ ಗಣಪತಿ ಹೋಮದೊಂದಿಗೆ ಆರಂಭವಾದ ಪೂಜಾ ಕಾರ್ಯಕ್ರಮವು ಮಧ್ಯಾಹ್ನದ ವೇಳೆಗೆ ಪ್ರಧಾನ ಅರ್ಚಕರಾದ ಮಂಗಳೂರಿನ ಸತೀಶ್ ಪುರೂಹಿತ್ ಅವರಿಂದ ವಿಶ್ವಕರ್ಮ ಮಾಹದೇವನೀಗೆ ಮಾಹಾಪೂಜೆ ನೆರೆವೆರಿಸಲಾಯಿತು. ನಂತರದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜ ಬಂದಾವರ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ವೀರಾಜಪೇಟೆ ಕಾವೇರಿ ಕಾಲೇಜು ವಿದ್ಯಾರ್ಥಿನಿ ಕವನ ಆರ್. ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿನಿ ರಂಗಸಮುದ್ರದ ನಿವಾಸಿ ಎ.ಆರ್. ರಕ್ಷಿತಾ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾಲೂಕಿನ ವಿಶ್ವಕರ್ಮ ಸಂಘದ ಅಧ್ಯಕ್ಷ ದಾಮೋದರ ಆಚಾರ್ಯ ಮತ್ತು ಉತ್ಸವ ಸಮಿತಿಯ ಸದಸ್ಯರು ಮಹಿಳಾ ಘಟಕದ ಅಧ್ಯಕ್ಷರು ಮತ್ತು ಸದಸ್ಯರು ಪೂಜಾ ಕಾರ್ಯಕ್ರಮದಲ್ಲಿ ಹಾಜರಿದ್ದರು.