ಮಡಿಕೇರಿ, ಸೆ. 21: ರಕ್ಷಕ್ ಪತ್ತಿನ ಸಹಕಾರ ಸಂಘದ 2018 -19ರ ಮಹಾಸಭೆ ಅಧ್ಯಕ್ಷ ಪ್ರಸನ್ನ ಕೆ.ಎಲ್. ಅವರ ಅಧ್ಯಕ್ಷತೆಯಲ್ಲಿ ಕೊಡಗು ಜಿಲ್ಲಾ ಯೂನಿಯನ್ ಸಭಾಂಗಣದಲ್ಲಿ ನಡೆಯಿತು. ಸಂಘದ ಪ್ರಥಮ ಮಹಾಸಭೆಯಲ್ಲಿ ಸಂಘದ ಸರ್ವತೋಮುಖ ಅಭಿವೃದ್ಧಿ ಬಗ್ಗೆ ಚರ್ಚಿಸಿ ಸಂಘದ ಎಲ್ಲಾ ಸದಸ್ಯರು ತಮ್ಮ ಎಲ್ಲಾ ವಿಧದ ಠೇವಣಿಗಳನ್ನು ಸಂಘದಲ್ಲಿ ಇಟ್ಟು ಸಂಘದ ಸದಸ್ಯರ ಬೇಡಿಕೆಗಳಿಗೆ ತಕ್ಕಂತೆ ಸಂಘದ ಉಪನಿಯಮ ಪ್ರಕಾರ ಸಾಲ ನೀಡುವಂತೆ ಸಭೆಯಲ್ಲಿ ಚರ್ಚಿಸಿ ಮುಂದಿನ ದಿನಗಳಲ್ಲಿ ಸಂಘದ ಪ್ರಗತಿಗೋಸ್ಕರ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.