ನಾಪೆÉÇೀಕ್ಲು, ಸೆ. 20: ನಾಪೆÉÇೀಕ್ಲು ನಾಡು ಗ್ರಾಹಕರ ಸಹಕಾರ ಸಂಘವು 2018-19ನೇ ಸಾಲಿನಲ್ಲಿ 5,16,532 ರೂ. ಲಾಭಗಳಿಸಿದೆ ಎಂದು ಗ್ರಾಹಕರ ಸಹಕಾರ ಸಂಘದ ಅಧ್ಯಕ್ಷ ಪಟ್ರಪಂಡ ಮೋಹನ್ ಮುದ್ದಪ್ಪ ತಿಳಿಸಿದರು.
ನಾಪೆÇೀಕ್ಲು ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದ್ದ ಸಂಘದ 86ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಸಂಘದಲ್ಲಿ ಸುಮಾರು 539 ಜನ ಸದಸ್ಯರಿದ್ದು, ಸಂಘವು 3,82,559 ಪಾಲು ಭಂಡವಾಳವನ್ನು ಹೊಂದಿದೆ ಎಂದ ಅವರು ಸಂಘವು ಹಲವು ಠೇವಣಾತಿಯನ್ನು ಹೊಂದಿದೆ. ಅಲ್ಲದೆ ಭವಿಷ್ಯ ನಿಧಿ 1,30,452 ರೂ, ಸಿಬ್ಬಂದಿ ಖಾತ್ರಿ ಠೇವಣಿ 1,26,041 ರೂ. ಮತ್ತು ಸಿಬ್ಬಂದಿ ಗ್ರಾಚ್ಯುಟಿ 23,320 ರೂ. ಒಟ್ಟು 2,79,813 ರೂ. ಠೇವಣಿಯನ್ನು ಹೊಂದಿದೆ ಎಂದು ತಿಳಿಸಿದರು. ಸಂಘದಲ್ಲಿ ಕ್ಷೇಮ ನಿಧಿ 1,55,309 ರೂ.ಗಳಿದ್ದು ಸಂಘವು ವ್ಯಾಪಾರ ವಹಿವಾಟನ್ನು ನಡೆಸುತ್ತಿದೆ. ಮಾರಾಟ ಮಳಿಗೆ ಮತ್ತು ಬಾಡಿಗೆಯಿಂದ 48,500 ರೂ. ಆದಾಯ ಗಳಿಸುತ್ತಿದೆ ಎಂದರು. ಈ ಪ್ರಯುಕ್ತ ಸಂಘದ ಸದಸ್ಯರಿಗೆ ಈ ವರ್ಷ ಶೇ. 10ರಷ್ಟು ಡಿವಿಡೆಂಡ್ ನೀಡಲಾಗುವದು ಎಂದು ಹೇಳಿದರು. ಸಂಘದ ಕಟ್ಟಡವು ಹಳೆಯದಾಗಿದ್ದು, ಕಟ್ಟಡವಾಗಿದ್ದು, ಮುಂದಿನ ದಿನಗಳಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಮಹಾ ಸಭೆಯ ಒಪ್ಪಿಗೆ ಬೇಕಾಗಿದ್ದು, ಸದಸ್ಯರು ಸಹಕಾರ ನೀಡುವಂತೆ ಮನವಿ ಮಾಡಿದರು.
ಸಭೆಯಲ್ಲಿ ನಿರ್ದೇಶಕರಾದ ಕುಲ್ಲೇಟಿರ ಅರುಣ್ ಬೇಬ, ಕೊಂಬಂಡ ಗಣೇಶ್, ನಾಟೋಳಂಡ ಕಸ್ತೂರಿ, ನಾಯಕಂಡ ದೀಪು, ನಾಯಕಂಡ ಮುತ್ತಪ್ಪ, ಎಂ.ಎಸ್. ಮಹಮ್ಮದ್ ಅಲಿ, ಬೊಟ್ಟೋಳಂಡ ಕೆ. ಕುಟ್ಟಪ್ಪ, ಕೇಟೋಳಿರ ಜಿ.ಮುತ್ತಮ್ಮ, ಹೆಚ್.ಎ. ಬೊಳ್ಳು, ಸಂಘದ ಕಾರ್ಯದರ್ಶಿ ಕಲ್ಲೇಂಗಡ ತಮ್ಮಿ ತಿಮ್ಮಯ್ಯ, ಸಿಬ್ಬಂದಿಗಳಾದ ಮುಕ್ಕಾಟಿರ ರಾಜಪ್ಪ, ತಟ್ಟಂಡ ಮುತ್ತಪ್ಪ ಇದ್ದರು.