ಚೆಟ್ಟಳ್ಳಿ, ಸೆ. 16: ಸಿದ್ದಾಪುರ ಹಾಗೂ ನೆಲ್ಯಹುದಿಕೇರಿಯ ನೆರೆ ಸಂತ್ರಸ್ತರಿಗೆ ಮೈಸೂರಿನ ಧರ್ಮಕ್ಷೇತ್ರ ಹಾಗೂ ಓಡಿಪಿ ಸಂಸ್ಥೆ ವತಿಯಿಂದ ಪರಿಹಾರ ಕಿಟ್ ವಿತರಿಸಲಾಯಿತು. ಸಿದ್ದಾಪುರದ ಚರ್ಚಿನ ಬಳಿ ವಿವಿಧ ಸಾಮಗ್ರಿಗಳ ಕಿಟ್‍ಗಳನ್ನು ಸಿದ್ದಾಪುರದ ಸಂತ ಜೋಸೆಫರ ದೇವಾಲಯದ ಧರ್ಮಗುರು ಫಾದರ್ ಪಿ ಜೋನಸ್ ಹಾಗೂ ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಗುರುಗಳಾದ ಫಾದರ್ ಮದಲೈ ಮುತ್ತು ಹಾಗೂ ಶ್ರೇಷ್ಠ ಗುರುಗಳಾದ ಫಾದರ್ ಲೆಸ್ಲಿ ಮೋರಾಸ್ ಓಡಿಪಿ ಸಂಸ್ಥೆಯ ನಿರ್ದೇಶಕರಾದ ಅಲೆಕ್ಸ್ ಪ್ರಶಾಂತ್ ಸಿಕ್ವೇರಾ ಒಟ್ಟು 654 ಕುಟುಂಬಗಳಿಗೆ ವಿತರಿಸಿದರು. ಕಾರ್ಯಕ್ರಮದಲ್ಲಿ ಓಡಿಪಿ ಸಂಸ್ಥೆ ಸಿಬ್ಬಂದಿ ಮೋಲಿ, ಜಾಯ್ಸ್ ಮೆನೆಜಸ್, ವಿಜಯ ನಾರಾಯಣ, ರತ್ನ ಫ್ರಾನ್ಸಿಸ್, ಮೆಲವೀನ್ ಹಾಗೂ ಓಡಿಪಿ ಸಂಸ್ಥೆಯ ಸದಸ್ಯರುಗಳು ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.