ಶನಿವಾರಸಂತೆ, ಸೆ. 17: ಜನರೇಟರನ್ನು ಸಾಗಿಸುತ್ತಿದ್ದ ಪಿಕ್‍ಅಪ್ ವಾಹನ (ಕೆಎ 13 ಬಿ 5425)ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮಗುಚಿಕೊಂಡ ಪರಿಣಾಮ ವಾಹನದಲ್ಲಿದ್ದ ಯುವಕನೋರ್ವ ಮೃತಪಟ್ಟಿದ್ದು, ಹಿಂಭಾಗ ಕುಳಿತಿದ್ದ ಇತರರು ಗಾಯಗೊಂಡ ಘಟನೆ ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಚಿಕ್ಕಾಕುಂದ ಗ್ರಾಮದಲ್ಲಿ ನಡೆದಿದೆ.ಹಾಸನದ ಇಲಾಯಿ ನಗರದ ಸಲ್ಮಾನ್ ಮೃತಪಟ್ಟ ಯುವಕ. ಆರೋಪಿ ವಾಹನ ಚಾಲಕ ಫೈರೋಜ್ ವಿರುದ್ಧ ಚೆಸ್ಕಾಂ ಕೊಡ್ಲಿಪೇಟೆ ಶಾಖೆಯ ಜೂನಿಯರ್ ಇಂಜಿನಿಯರ್ ಮನುಕುಮಾರ್ ದೂರು ನೀಡಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಸ್ಥಳಕ್ಕೆ ವೃತ್ತ ನಿರೀಕ್ಷಕ ನಂಜುಂಡೇಗೌಡ, ಪಿಎಸ್‍ಐ ಎಚ್.ಎಂ. ಮರಿಸ್ವಾಮಿ ಭೇಟಿನೀಡಿ ಪರಿಶೀಲಿಸಿದರು.