*ಗೋಣಿಕೊಪ್ಪಲು, ಸೆ. 15: ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಪ್ರಧಾನ ಮಂತ್ರಿ ಘೋಷ ಅಭಿಯಾನವನ್ನು ತಿತಿಮತಿ ಆರೋಗ್ಯ ಕೇಂದ್ರದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ತಾ.ಪಂ. ಸದಸ್ಯೆ ಆಶಾ ಜೇಮ್ಸ್ ಉದ್ಘಾಟಿಸಿದರು. ಪೌಷ್ಠಿಕ ಆಹಾರ, ಸೀಮಂತ, ಅನ್ನಪ್ರಸನ್ನ ಕಾರ್ಯಕ್ರಮಗಳ ಬಗ್ಗೆ ತಿಳಿಸಲಾಯಿತು. ಈ ಸಂದರ್ಭ ಗ್ರಾ.ಪಂ. ಸದಸ್ಯ ಎನ್.ಎನ್. ಅನೂಪ್‍ಕುಮಾರ್, ವಿಜಯ, ತಾಲೂಕು ಸಿ.ಡಿ.ಪಿ.ಓ. ಸೀತಾಲಕ್ಷ್ಮಿ, ಸ್ಥಳೀಯ ಶಾಲಾ ಮುಖ್ಯೋಪಾಧ್ಯಾಯ ಬೊಮ್ಮಲಿಂಗ, ಬಿ.ಹೆಚ್.ಇ.ಓ. ಶಿವಯ್ಯ, ಡಾ. ಹೊಸಮನಿ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಕಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತರು ಹಾಜರಿದ್ದರು.