*ಗೋಣಿಕೊಪ್ಪಲು, ಸೆ. 15: ಭವಿಷ್ಯದಲ್ಲಿ ಭಾರತಕ್ಕೆ ಕಸ ವಿಲೇವಾರಿಯದೇ ಬಹು ದೊಡ್ಡ ಸಮಸ್ಯೆಯಾಗಲಿದೆ ಎಂದು ಗೋಣಿಕೊಪ್ಪಲಿನ ವಿವೇಕಾನಂದ ಯೂತ್ ಮೂವ್‍ಮೆಂಟ್ ಕೊಡಗು ಜಿಲ್ಲಾ ಘಟಕದ ಸಂಚಾಲಕ ಡಾ. ಕೆ.ಎನ್. ಚಂದ್ರಶೇಖರ್ ಹೇಳಿದರು.
ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಪೊನ್ನಂಪೇಟೆ ಗೋಲ್ಡನ್ ಜೇಸಿ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಕುಡಿಯುವ ನೀರಿನ ಶುದ್ಧತೆ ಕುರಿತು ಮಾತನಾಡಿದರು.
ಗಂಗಾಸ್ನಾನ ತುಂಗ ಪಾನ ಎಂಬ ಮಾತು ಜನಜನಿತವಾಗಿದೆ. ಆದರೆ ಈಗ ಈ ಎರಡು ನದಿಗಳ ನೀರು ಉಪಯೋಗಕ್ಕೆ ಬಾರದಂತಾಗಿದೆ. ನೀರಿನ ಶುದ್ಧತೆ ಕಾಪಾಡಬೇಕಾದರೆ ಭೂಮಿಯನ್ನು ಮೊದಲು ಶುದ್ಧವಾಗಿಡಬೇಕು. ಭೂಮಿಯ ಮೇಲಿನ ಎಲ್ಲ ವಸ್ತುಗಳನ್ನು ಶುದ್ಧವಾಗಿಡಬೇಕು. ಪ್ರಕೃತಿ ಎಲ್ಲವನ್ನೂ ಕೊಟ್ಟಿದೆ. ಅದನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನೂ ನೀಡಿದೆ. ಇದನ್ನು ವಿವೇಚ ನಾಯುತವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಮರಗಳಿರುವ ಕಡೆ ನೀರು ಇಂಗುವದೇ ಅಲ್ಲದೆ ಶುದ್ಧ ನೀರಿರುತ್ತದೆ. ಮರಗಳಿಲ್ಲದಿದ್ದರೆ ನೀರು ಇರುವದಿಲ್ಲ. ಜನಸಂಖ್ಯೆ ಹೆಚ್ಚಳ ಮತ್ತು ಆಧುನಿಕತೆಯ ಸೌಲಭ್ಯ ಮಾರು ಹೋದ ಜನತೆ ಇನ್ನಿಲ್ಲದಂತೆ ಭೂಮಿಯ ಮೇಲೆ ದೌರ್ಜನ್ಯ ಎಸಗಿದ್ದಾರೆ. ಇದರ ಪರಿಣಾಮವಾಗಿ ಬಹಳಷ್ಟು ಸಂಕಷ್ಟಗಳನ್ನು ಎದುರಿಸು ವಂತಾಗಿದೆ ಎಂದು ನುಡಿದರು.
ಶೇ. 70 ಆರೋಗ್ಯ ನೀರಿನಿಂದಲೇ ಕೆಡುತ್ತಿದೆ. ಮಕ್ಕಳೂ ದೇಹ ಬಯಸುವಷ್ಟು ನೀರು ಕುಡಿಯುತ್ತಿಲ್ಲ. ಪೆಪ್ಸಿ ಕೋಲ ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ನೀರು ಕುಡಿಯುವ ಮೂಲಕ ದೇಹದ ಉಪ್ಪಿನಾಂಶ ಮೂತ್ರದ ಮೂಲಕ ಹೊರಹೋದರೆ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಜತೆಗೆ ಮೂತ್ರ ಕೋಶದ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ಬೆಳಿಗ್ಗೆ ಎದ್ದು ಚೆನ್ನಾಗಿ ನೀರು ಕುಡಿಯ ಬೇಕು ಎಂದು ಸಲಹೆ ಮಾಡಿದರು. ಗೋಲ್ಡನ್ ಜೇಸಿ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸಂಜು ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ಜೆ.ಸೋಮಣ್ಣ, ಮುಖ್ಯ ಶಿಕ್ಷಕ ಚಂದ್ರಶೇಖರ್, ಜೆಸಿ ಸದಸ್ಯರಾದ ಸುಜಯ್ ಬೋಪಯ್ಯ, ಪುಳ್ಳಂಗಡ ನಟೇಶ್, ಪುನೀತ್ ಹಾಜರಿದ್ದರು.
-ಎನ್.ಎನ್.ದಿನೇಶ್