ಚೆಟ್ಟಳ್ಳಿ, ಸೆ. 15: ಚೆಟ್ಟಳ್ಳಿಯ ಜೋಮಾಲೆ ಕೊಡವ ಪೊಮ್ಮಕ್ಕಡ ಕೂಟದಿಂದ ಸಂತೋಷ ಕೂಟ ಆಚರಣೆ ತಾ. 20 ರಂದು ಬೆಳಿಗ್ಗೆ 10.30 ಗಂಟೆಗೆ ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷೆ ಮುಳ್ಳಂಡ ಶೋಭಾ ಚಂಗಪ್ಪ ತಿಳಿಸಿದ್ದಾರೆ.

ಅಂದು ಬೆಳ್ಳಿಗೆ ಹನ್ನೊಂದು ಗಂಟೆಗೆ ಸಂಘದ ಸದಸ್ಯರಿಗೆ ಮತ್ತು ಸದಸ್ಯರ ಕುಟುಂಬಗಳಿಗೆ ಆಟೋಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು. ಮನೋರಂಜನೆ ಕಾರ್ಯಕ್ರಮ ಮುಗಿದನಂತರ ಮಧ್ಯಾಹ್ನ ಎಲ್ಲರಿಗೂ ಸಾಂಪ್ರದಾಯಿಕ ಭೋಜನದ ವ್ಯವಸ್ಥೆ ಇದೆ. ಎಲ್ಲ ಸದಸ್ಯರು ಕುಟುಂಬ ಸಮೇತ ಹಾಜರಾಗುವಂತೆ ಅವರು ಕೋರಿದ್ದಾರೆ.