ವೀರಾಜಪೇಟೆ: ಖಾಸಾಗಿ ಹಣಕಾಸು ವಲಯದ ಬಿ.ಎಸ್.ಎಸ್. ಮೈಕ್ರೋ ಫೈನಾನ್ಸ್ ಲಿಮಿಟೆಡ್ ಸಂಸ್ಥೆಯು ನೆರೆ ಸಂತ್ರಸ್ತರಿಗಾಗಿ ವೀರಾಜಪೇಟೆ ನಗರದ ವಿಜಯನಗರದಲ್ಲಿರುವ ಶಾಖಾ ಕಚೇರಿಯಲ್ಲಿ ಸಂತ್ರಸ್ತ ನೊಂದ ಮಹಿಳೆಯರ ಕುಟುಂಬಗಳಿಗೆ ನಿತ್ಯ ಉಪಯೋಗಿ ದಿನ ಬಳಕೆಯ ಸಾಮಗ್ರಿಗಳನ್ನು ವಿತರಿಸಿದರು. ಈ ಸಂದರ್ಭ ಮಾತನಾಡಿದ ಪ್ರಧಾನ ಕಚೇರಿಯ ಮೇಲಾಧಿಕಾರಿಗಳಾದ ಜಗದೀಶ್ ಹೆಚ್.ವಿ. ಅವರು ಸಂಸ್ಥೆಯು ಕಳೆದ 22 ವರ್ಷಗಳಿಂದ ತನ್ನ ಹಣಕಾಸು ವ್ಯವಹಾರಗಳನ್ನು ನಡೆಸಿಕೊಂಡು ಬರುತಿದೆ. ಹಣಕಾಸು ವ್ಯವಹಾರಗಳಿಗೆ ಸೀಮಿತವಾಗಿರದೆ ಸಂಸ್ಥೆ ಜನಪರ ಕಾಳಜಿಯಿಂದ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಮುನ್ನಡೆಯುತ್ತಿದೆ ಕಳೆದ ಬಾರಿ ಕೊಡಗಿನಲ್ಲಿ ಸಂಭವಿಸಿದ ಜಲಪ್ರಳಯದಲ್ಲಿ ತುತ್ತಾದ ಸಂಘದ ಮಹಿಳೆಯ ಕುಟುಂಭಗಳಿಗೆ ತಲಾ ಒಂದರಂತೆ 300 ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಗಿದೆ. ಅದೇ ರೀತಿಯಲ್ಲಿ ವೀರಾಜಪೇಟೆ ತಾಲೂಕು ಸೇರಿದಂತೆ ಮಡಿಕೇರಿ-ಸೊಮವಾರಪೇಟೆ ತಾಲೂಕಿವಿನ ಸಂತ್ರಸ್ತ ಕುಟುಂಬಗಳಿಗೆ ಕಿಟ್ ವಿತರಿಸಿಸಲಾಗುತ್ತಿದೆ. ಸಂಸ್ಥೆಯು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ಶಾಲಾ ವಿಧ್ಯಾರ್ಥಿಗಳನ್ನು ಗುರುತಿಸಿ 2000 ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಿಸಲಾಗಿದೆ. ಅಲ್ಲದೆ ಸುಮಾರು 20 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯವನ್ನು ನಿರ್ಮಿಸಿಕೊಟ್ಟಿದೆ ಎಂದರು.
ವೀರಾಜಪೇಟೆ ತಾಲೂಕಿನ ಕರಡಿಗೋಡು ಪೈಸಾರಿ, ಕುಂಬಾರಗುಂಡಿ, ಕಟ್ಟೆಮಾಡು, ಮೈತಾಡಿ, ಚೆನ್ನಂಗೊಲ್ಲಿ, ಬಾರಡಿ, ನೆಲ್ಲಿಹುದಿಕೇರಿ, ಸಿದ್ದಾಪುರ, ಕರಡಿಗೋಡು, ನೆಲ್ಲಿಹುದಿಕೇರಿ, ಎಂ.ಜಿ. ಕಾಲೊನಿ, ಜ್ಯೋತಿನಗರ, ಸಿದ್ದಾಪುರ ನಗರ, ಕಿಗ್ಗಾಲು, ಕೂಡುಪರಂಬು, ನಲ್ವತೆಕ್ರೆ ಮತ್ತು ಬೆಕ್ಕೆಸೊಡ್ಲೂರು ಗ್ರಾಮಗಳ ಸ್ವಸಹಾಯ ಸಂಘದ 300 ಬಡ ಸಂತ್ರಸ್ತ ಮಹಿಳೆಯರಿಗೆ ಪರಿಹಾರ ಕಿಟ್ ವಿತರಿಸಲಾಯಿತು.
ಪರಿಹಾರ ಕಿಟ್ ವಿತರಣೆಯ ಸಂದರ್ಭ ಬಿ.ಎಸ್.ಎಸ್. ಮೈಕ್ರೋ ಫೈನಾನ್ಸ್ ಲಿಮಿಟೆಡ್ ಸಂಸ್ಥೆಯ ವಲಯಾಧಿಕಾರಿ ಯಶವಂತ್ ಕುಮಾರ್ ಎಂ.ಎಸ್, ಲೆಕ್ಕ ಪರಿಶೋಧಕ ಕಿರಣ್ ಕುಮಾರ್ ಜೆ.ಎಂ, ಸಹಾಯಕ ವಲಯಾಧಿಕಾರಿ ಪ್ರದೀಪ್ ಒ, ಸಹಾಯಕ ಲೆಕ್ಕ ಪರಿಶೋಧಕ ಸಿದ್ದರಾಜು ಎಂ.ಎಸ್, ಪ್ರಧಾನ ಕಚೇರಿಯ ವ್ಯವಸ್ಥಾಪಕ ಮಹೇಂದ್ರ ಮತ್ತು ಸಿಬ್ಬಂದಿ ವರ್ಗ ಹಾಗೂ ತಾಲೂಕಿನ ವಿವಿಧೆಡೆಗಳಿಂದ ಅಗಮಿಸಿದ ಸ್ವಸಹಾಯ ಸಂಘದ ಸಂತ್ರಸ್ತ ಮಹಿಳಾ ಸದಸ್ಯರು ಹಾಜರಿದ್ದರು.
ಚೆಟ್ಟಳ್ಳಿ: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಕಾವೇರಿ ನದಿ ನೀರಿನ ಪ್ರವಾಹಕ್ಕೆ ಸಿಲುಕಿ ಆಸ್ತಿ-ಪಾಸ್ತಿ ಕಳೆದುಕೊಂಡು ಸಂಕಷ್ಟದಲ್ಲಿದ್ದ ಬೇತ್ರಿ ಗ್ರಾಮದ ಕುಟುಂಬಗಳಿಗೆ ಕೊಡಗಿನ ಬಡವರ ಬೆಳಕು ಚಾರಿಟೇಬಲ್ ಟ್ರಸ್ಟ್ ಮೂಲಕ ನೆರೆ ಸಂತ್ರಸ್ತರಿಗೆ ಕಿಟ್‍ಗಳನ್ನು ವಿತರಣೆ ಮಾಡಲಾಯಿತು.
ಅನಿವಾಸಿ ಭಾರತೀಯರಾದ ಅಬ್ದುಲ್ ಸಲಾಂ ಬಾರಿಕೆ ಅವರು ನೀಡಿದ ಸುಮಾರು ಒಂದೂವರೆ ಲಕ್ಷ ಮೌಲ್ಯದ ಹೊದಿಕೆ ಕಿಟ್‍ಗಳನ್ನು 62 ಕುಟುಂಬಗಳಿಗೆ ಕೆಬಿಬಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಹೆಚ್. ಮೊಹಮ್ಮದ್ ವಿತರಣೆ ಮಾಡಿದರು. ಕೊಂಡಂಗೇರಿ ಮುಸ್ಲಿಂ ಜಮಾಅತ್ ಸಮಿತಿಯವರು ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಕೆಬಿಬಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಐವತ್ತು ಸಾವಿರ ನೆರವನ್ನು ನೀಡಲಾಯಿತು. ಬೇತ್ರಿ ಗ್ರಾಮದಲ್ಲಿ ಮನೆ ಕಳೆದುಕೊಂಡ ಎರಡು ಕುಟುಂಬಗಳಿಗೆ ತಲಾ ರೂ. 5 ಸಾವಿರ ನೀಡಲಾಯಿತು.
ಕಡು ಬಡ ಕುಟುಂಬವೊಂದಕ್ಕೆ ಮನೆ ನಿರ್ಮಾಣ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಹಲವು ಮಂದಿಗೆ ತುರ್ತು ಚಿಕಿತ್ಸೆ ಹಾಗೂ ಔಷಧಿಗಳಿಗೂ ಟ್ರಸ್ಟ್ ವತಿಯಿಂದ ನೆರವು ನೀಡಲಾಗಿದೆ ಎಂದರು.
ಕೆಬಿಬಿ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ನೌಷಾದ್ ಜನ್ನತ್ ಮಾತನಾಡಿ, ಕೊಡಗಿನ ಬಡವರ ಬೆಳಕು ಎಂಬ ಚಾರಿಟಬಲ್ ಟ್ರಸ್ಟ್ ಮೂಲಕ ಜನಪರ ಕಾರ್ಯಕ್ರಮಗಳನ್ನು ಮಾಡಿ ಶೋಷಿತ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಲವು ಯೋಜನೆಗಳನ್ನು ರೂಪಿಸಿದ್ದು ಸಂಕಷ್ಟದಲ್ಲಿರುವವರಿಗೆ ಸ್ವಂದಿಸುವ ಕಾರ್ಯ ಮಾಡುತ್ತಿದೆ ಎಂದರು.
ಕೆಬಿಬಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಫತಾಹ್ ಕಡಂಗ, ಸಹ ಕಾರ್ಯದರ್ಶಿ ಶಫೀಕ್ ಗುಂಡಿಗೆರೆ, ಖಜಾಂಚಿ ರಫೀಕ್ ವೀರಾಜಪೇಟೆ, ನಿರ್ದೇಶಕ ಅಶ್ರಫ್ ಗೋಣಿಕೊಪ್ಪ, ಉದ್ಯಮಿ ಶರೀಫ್ ಕುಶಾಲನಗರ, ಬೇತ್ರಿ ಮಸೀದಿ ಸಮಿತಿ ಅಧ್ಯಕ್ಷ ಮೊಮ್ನಿ, ಕಾರ್ಯದರ್ಶಿ ಸಮೀರ್ ಸೇರಿದಂತೆ ಮತ್ತಿತರರು ಹಾಜರಿದ್ದರು.ಸಿದ್ದಾಪುರ: ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿಯ ನೆರೆ ಸಂತ್ರಸ್ತರಿಗೆ ಮೈಸೂರಿನ ಧರ್ಮಕ್ಷೇತ್ರ ಹಾಗೂ ಓಡಿಪಿ ಸಂಸ್ಥೆ ವತಿಯಿಂದ ಸಂತ್ರಸ್ತರಿಗೆ ಪರಿಹಾರ ವಿತರಿಸಲಾಯಿತು. ಸಿದ್ದಾಪುರದ ಚರ್ಚಿನ ಬಳಿ ವಿವಿಧ ಸಾಮಗ್ರಿಗಳ ಕಿಟ್‍ಗಳನ್ನು ಸಿದ್ದಾಪುರದ ಸಂತ ಜೋಸೆಫರ ದೇವಾಲಯದ ಧರ್ಮಗುರು ಪಿ. ಜೋನಸ್ ಹಾಗೂ ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಗುರುಗಳಾದ ಮದಲೈಮುತ್ತು ಹಾಗೂ ಶ್ರೇಷ್ಠ ಗುರುಗಳಾದ ಲೆಸ್ಲಿ ಮೋರಾಸ್, ಓಡಿಪಿ ಸಂಸ್ಥೆಯ ನಿರ್ದೇಶಕ ಅಲೆಕ್ಸ್ ಪ್ರಶಾಂತ್ ಸಿಕ್ವೇರಾ ಅವರು ವಿತರಿಸಿದರು. ಒಟ್ಟು 654 ಕಿಟ್‍ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಓಡಿಪಿ ಸಂಸ್ಥೆ ಸಿಬ್ಬಂದಿಯವರಾದ ಮೋಲಿ ಜಾಯ್ಸ್ ಮೆನೆಜಸ್, ವಿಜಯ ನಾರಾಯಣ, ರತ್ನ ಫ್ರಾನ್ಸಿಸ್, ಮೆಲವೀನ್ ಹಾಗೂ ಓಡಿಪಿ ಸಂಸ್ಥೆಯ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.