ಮಡಿಕೇರಿ, ಸೆ. 13: ಮಹಾದೇವಪೇಟೆ ಮಹಿಳಾ ಸಹಕಾರ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷೆ ಯನ್. ಸವಿತಾ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಶಿಕ್ಷಕರ ದಿನಾಚಣೆಯೂ ಅದೇ ದಿನ ಇದ್ದುದರಿಂದ ಅದರ ಅಂಗವಾಗಿ ಶಿಕ್ಷಕ ವೃತ್ತಿಯಲ್ಲಿದ್ದ ಸಂಘದ ಸದಸ್ಯೆಯರನ್ನು ಸನ್ಮಾನಿಲಾಯಿತು. ಹಾಗೆಯೇ 70 ವರ್ಷಗಳಿಗಿಂತ ಮೇಲ್ಪಟ್ಟ ಸಂಘದ ಹಿರಿಯ ಸದಸ್ಯೆಯರನ್ನೂ ಸನ್ಮಾನಿಲಾಯಿತು. ಹೆಚ್ಚಿನ ಅಂಕಗಳನ್ನು ಪಡೆದ ಸದಸ್ಯೆಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.

ಸಭೆಯಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಸಂಘದ ಸದಸ್ಯೆಯರು ಉಪಸ್ಥಿತರಿದ್ದರು. ಸಂಧ್ಯಾ ಅಶೋಕ್ ಪ್ರಾರ್ಥಿಸಿ, ಸಂಘದ ಅಧ್ಯಕ್ಷೆ ಸವಿತಾ ಭಟ್ ಸ್ವಾಗತಿಸಿದರು. ವಸುಂಧರಾ ಪ್ರಸನ್ನ ವಂದಿಸಿದರು. ರಾಷ್ಟ್ರ ಗೀತೆಯೊಡನೆ ಸಭೆ ಮುಕ್ತಾಯಗೊಂಡಿತು.